ಕಾರವಾರ(KARWAR) : 1995 ನೇ ಸಾಲಿನಲ್ಲಿ ತೆರೆ ಕಂಡ ಚಲನಚಿತ್ರವೊಂದರಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ದೃಶ್ಯವೊಂದನ್ನ ಬಾಲಕಿ ಗುರುತಿಸಿದ್ದಾಳೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ಬೇಟೆಗಾರ ಚಲನಚಿತ್ರದ(BETEGAR CINEMA) 1 ನಿಮಿಷ 13 ಸೆಕೆಂಡ್ ದೃಶ್ಯದಲ್ಲಿ ನಮ್ಮ ದೇಶದ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಪ್ರದರ್ಶನಗೊಳಿಸಿದ ಸಲುವಾಗಿ ಚಿತ್ರತಂಡ ಮತ್ತು ಬಿಡುಗಡೆಗೊಳಿಸಿದ ಸೆನ್ಸಾರ್ ಮಂಡಳಿ(SENSOR BOARD) ವಿರುದ್ಧ ರಾಷ್ಟ್ರಧ್ವಜ ಅಪಮಾನ ಪ್ರಕರಣದಡಿ ಕಠಿಣ ಕಾನೂನುಕ್ರಮಕ್ಕೆ ಒಳಪಡಿಸಲು ಜನಶಕ್ತಿವೇದಿಕೆಯ(JANASHAKTI VEDIKE) ಮುಖಾಂತರ ಆಗ್ರಹಿಸಲಾಗಿದೆ.
ಆಗಸ್ಟ್ 02 ಶುಕ್ರವಾರದಂದು ಮಧ್ಯಾಹ್ನ ಸುಮಾರು ನಾಲ್ಕು ಗಂಟೆಗೆ ಉದಯ ಮೂವೀಸ್(UDAY MOOVIES) ನಲ್ಲಿ ಬೇಟೆಗಾರ ಸಿನಿಮಾ ಪ್ರಸಾರವಾಗಿತ್ತು. ಮುರ್ಡೇಶ್ವರದ ಸತೀಶ್ ನಾಯ್ಕ ಎಂಬುವವರ ಮಗಳು ಮಾನ್ಯ (MANYA) ಎಂಬಾಕೆ ವೀಕ್ಷಿಸುತ್ತಿರುವಾಗ ಆಕಸ್ಮಿಕವಾಗಿ ಗಮನಿಸಿದ್ದಾಳೆ. ಐ.ಜಿ.ಪಿ (ಪೋಲಿಸ್ ಮಹಾನಿರೀಕ್ಷಕರ)(IGP) ಚೇಂಬರನಲ್ಲಿ ಪೊಲೀಸ್ ಇನ್ಸೆಕ್ಟರ್ (ಪೋಲಿಸ್ ನಿರೀಕ್ಷಕರ) ಪಾತ್ರದಲ್ಲಿ ಇರುವ ಸೀತಾರಾ (SEETARA)ರವರು ಐ.ಜಿ.ಪಿ.ಯವರ ಟೇಬಲ್ ಎದುರು ಕುಳಿತು ಇಲಾಖೆಯ ಸಂಭಾಷಣೆ ದೃಶ್ಯ ನಡೆಯುತ್ತಿರುತ್ತದೆ. ಸಿನಿಮಾದ ಈ ದೃಶ್ಯವನ್ನು ಸೂಕ್ಷ್ಮವಾಗಿ ಗಮನಿಸಿದ ಮಾನ್ಯ ತನ್ನ ತಂದೆಯವರ ಗಮನಕ್ಕೆ ತಂದಿದ್ದಾಳೆ. ಟೇಬಲ್ ಮೇಲೆ ರಾಷ್ಟ್ರಧ್ವಜ ತಲೆಕೆಳಗಾಗಿ ಇಟ್ಟುಕೊಂಡಿದ್ದಾರೆ ಅಲ್ಲಿ ನೋಡಿರಿ, ನೀವು ಮತ್ತು ಶಾಲೆಯಲ್ಲಿ ರಾಷ್ಟ್ರಧ್ವಜ ಸ್ವಲ್ಪ ತಲೆಕೆಳಗಾಗಿ ತೋರಿಸಿದ್ರು ಅಕಸ್ಮಾತ್ ಸಣ್ಣಪುಟ್ಟ ತೊಂದರೆ ಮಾಡಿದ್ರು ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ ಅಂತ ಹೇಳ್ತಾ ಇದ್ರಿ, ಆದರೆ ಅಷ್ಟು ಹಳೆಯ ಸಿನಿಮಾ(OLD CINEMA)ದಲ್ಲಿ ಇಲ್ಲಿಯ ತನಕ ರಾಷ್ಟ್ರಧ್ವಜ ತಲೆಕೆಳಗಾಗಿ ಇಟ್ಟಿದ್ದು ನೋಡಿಕೊಂಡು ಯಾರು ಕಾನೂನು ಕ್ರಮ (LAW ACTION) ಕೈಗೊಂಡಿಲ್ವಾ ಎಂದು ಕೇಳಿದ್ದಾಳೆ.
ಹೀಗಾಗಿ ಸತೀಶ್ ನಾಯ್ಕ ಸಿನೆಮಾದ(FILM) ದೃಶ್ಯ ಬೇರೆಬೇರೆ ಮೂಲಗಳಲ್ಲಿ ಹುಡುಕಾಡಿದಾಗ ಎಲ್ಲದರಲ್ಲೂ ರಾಷ್ಟ್ರಧ್ವಜ ಕಲೆಕೆಳಗಾದ 1 ನಿಮಿಷ 13 ಸೆಕೆಂಡ್ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತಿದೆ. ಸೂಪರ್ ಹಿಟ್ ಬೇಟೆಗಾರ(SUPER HIT BETEGARA) ಸಿನಿಮಾವನ್ನು 29 ವರ್ಷಗಳ ಕಾಲ ಸ್ಪಷ್ಟವಾಗಿ 1 ನಿಮಿಷ 13 ಸೆಕೆಂಡ್ ಕಾಣಿಸುವ ತಲೆಕೆಳಗಾದ ರಾಷ್ಟ್ರಧ್ವಜದ ದೃಶ್ಯ ಕಾಣಿಸಿದರೂ ನಮ್ಮ ದೇಶದ ಪ್ರಜೆಗಳು ವೀಕ್ಷಿಸದಿರುವುದೇ ಒಂದು ರೀತಿ ವಿಚಿತ್ರವಾಗಿದೆ. ಅದು ಕೂಡ ರಾಷ್ಟ್ರಧ್ವಜಕ್ಕೆ ಅಗೌರವ ಅಥವಾ ಅಪಮಾನ ಆದಾಗ ಕೂಡಲೇ ಕಾನೂನುಕ್ರಮ ಜರುಗಿಸಬೇಕಾದ ಕಾನೂನು ಪರಿಪಾಲಕರಾದ ಉನ್ನತ ಹುದ್ದೆ ಐ.ಜಿ.ಪಿ. ಪಾತ್ರ ವರ್ಗದವರ ಟೇಬಲ್ ಮೇಲೆ ರಾಷ್ಟ್ರಧ್ವಜ ತಲೆಕೆಳಗಾಗಿಟ್ಟು ಚಿತ್ರೀಕರಣ ನಡೆಸಿದ್ದು ಕ್ಷಮಿಸಲಾರದ ಅಪರಾಧ ಆಗಿರುತ್ತದೆ. ಇದು ಒಂದು ದಿನದ ದೃಶ್ಯವಲ್ಲ ತಲೆ ತಲಾಂತರ ಮುಂದಿನ ಪೀಳಿಗೆಯವರು ಹಿಂದಿನ ಸಿನಿಮಾ ನೋಡುವ ಆಸೆಯಿಂದ ವೀಕ್ಷಣೆ ಮಾಡಿದಾಗ ಪುನಃ-ಪುನಃ ಈ ದೃಶ್ಯ ನೋಡಿ ನಮ್ಮ ದೇಶದ ರಾಷ್ಟ್ರಧ್ವಜಕ್ಕೆ ಅಪಮಾನ ಆಗುತ್ತಿರುತ್ತದೆ. ಈ ದೃಶ್ಯ ವೀಕ್ಷಣೆ ಮಾಡಿದ ಮುಂದಿನ ಪೀಳಿಗೆಯ ಮಕ್ಕಳ ಮನಸ್ಸಿನ ಭಾವನೆಯಲ್ಲಿ ಹಿಂದಿನ ಪ್ರಜೆಗಳು ರಾಷ್ಟ್ರಧ್ವಜ ಹೇಗೆ ಇರಲಿ ಕಡೆಗಣಿಸಿ, ಗೌರವ ಕೊಡುತ್ತಿಲ್ಲವೇನು ಅಂತ ಅಂದುಕೊಳ್ಳುವ ಸಂದರ್ಭ ಬರಬಹುದು.
ಹೀಗಾಗಿ ಅಂತರ್ಜಾಲಗಳಲ್ಲಿ (INTERNET) ಮತ್ತೆ ಯಾವುದೇ ಟಿವಿ ಚಾನಲ್(TV CHANNEL)ಗಳಲ್ಲಿ ಪ್ರದರ್ಶನ ಆಗುವ ಮೊದಲು ಈ 1 ನಿಮಿಷ 13 ಸೆಕೆಂಡ್ ರಾಷ್ಟ್ರಧ್ವಜ ತಲೆಕೆಳಗಾಗಿರುವ ದೃಶ್ಯದ ತುಣುಕನ್ನು ತೆಗೆದುಹಾಕಿ ಪ್ರದರ್ಶನ ಆಗುವ ಹಾಗೆ ಮಾಡಬೇಕು ಜೊತೆಗೆ ಚಿತ್ರೀಕರಣ ನಡೆಸಿದ ಬೇಟೆಗಾರ ಚಲನಚಿತ್ರ ತಂಡದ ಮೇಲೆ ಹಾಗೂ ತಲೆಕೆಳಗಾದ ರಾಷ್ಟ್ರಧ್ವಜವನ್ನು ಗಮನಿಸದೆ ನಿರ್ಲಕ್ಷತನದಿಂದ ಬಿಡುಗಡೆಗೊಳಿಸಿದ ಚಲನಚಿತ್ರ ಸೆನ್ಸಾರ್ ಮಂಡಳಿಯ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ಜನಶಕ್ತಿ ವೇದಿಕೆ ಆಗ್ರಹಿಸಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದನ್ನು ಓದಿ. ಮತ್ತೆ ಹಾಡಿದ ಹೃದಯಗೀತೆ