ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal): ಗ್ರಾಮಿಣ ಠಾಣೆ ಪೊಲೀಸರು ನೂಜ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ದಾಳಿ(Raid) ಮಾಡಿ ಇಸ್ಪಿಟ್ ಆಡುತ್ತಿದ್ದ ಹಲವರನ್ನು ಬಂಧಿಸಿದ್ದಾರೆ.
ಹಣವನ್ನು ಪಂಥವಾಗಿ ಕಟ್ಟಿ ಅಂದರ್ ಬಾಹರ್ ಜೂಜಾಟ ಆಡುತ್ತಿರುವ ಮಾಹಿತಿ ಪಡೆದ ಭಟ್ಕಳ ಡಿವೈಎಸ್ಪಿ ಮಹೇಶ ಎಮ್. ಕೆ. , ಸಿಪಿಐ ಮಂಜುನಾಥ ಎ. ಲಿಂಗಾರೆಡ್ಡಿ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಭರಮಪ್ಪ ಬೆಳಗಲಿ . ಅವರು ನೂಜ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಗೋಪಾಲ ತಂದೆ ಲಕ್ಷ್ಮಣ ಖಾರ್ವಿ (42) ಉಪ್ಪುಂದ, ಬೈಂದೂರು, ನಾಗರಾಜ ತಂದೆ ನಾರಾಯಣ ನಾಯ್ಕ (34) ಕೊಳೆಗೇರಿ, ಉತ್ತರಕೊಪ್ಪ, ಜಬ್ಬಾರ ತಂದೆ ಅಬ್ದುಲ್ ಖಾದರ ಸಾಬ (33) ರವೀಂದ್ರ ಸಿದ್ದಾಪುರ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಉಳಿದ ಆರೋಪಿತರಾದ ಜಯಂತ @ ಕೋಳಿ ಜಯಂತ ತಂದೆ ನಾರಾಯಣ ನಾಯ್ಕ ವಾಸ: ಮುರ್ಡೇಶ್ವರ, ಭಟ್ಕಳ, ಬಾಬು @ ಕೋಳಿ ಬಾಬು ತಂದೆ ಅಣ್ಣಪ್ಪ ನಾಯ್ಕ ವಾಸ: ಕೋಟೆ ಬಾಗಿಲು, ಶಿರಾಲಿ, ಭಟ್ಕಳ, ದತ್ತಾ ತಂದೆ ಮಾದೇವ ನಾಯ್ಕ ವಾಸ: ಕೋಟೆಬಾಗಿಲು, ಶಿರಾಲಿ, ಭಟ್ಕಳ, ಇರ್ಫಾನ್ ಸಾ: ಮುರ್ಡೇಶ್ವರ , ಕುಮಾರ ಗೌಡ ವಾಸ: ಉತ್ತರಕೊಪ್ಪ ರಾಜೇಶ ವಾಸ: ಬೈಂದೂರು , ಹಾಗೂ ಇನ್ನೂ ಐದಾರು ಜನರು ಓಡಿ ಹೋಗಿದ್ದಾರೆ.
ದಾಳಿಯ ಬೇಳೆ 9,700/-ರೂಪಾಯಿಗಳ ನಗದು ಹಣ ಮತ್ತು 8,075 ರೂಪಾಯಿಗಳ ಮೌಲ್ಯದ 10 ಸ್ವತ್ತಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಭಟ್ಕಳ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಸಿಬ್ಬಂದಿಗಳಾದ ಶಿವಾನಂದಪ್ಪ ವಡ್ಡರ, ಶ್ರೀಪಾದ ನಾಯ್ಕ, ಬಾಗಪ್ಪಕಡಕಲ್, ವೀರಣ್ಣ ಬಳ್ಳಾರಿ, ತನಿಖಾ ಸಹಾಯಕರಾದ ಮದಾರಸಾಬ ಚಿಕ್ಕೇರಿ, ಮಂಜುನಾಥ ಖಾರ್ವಿ, ಜೀಪ್ ಚಾಲಕ ಸಂತೋಷ ನಾಯ್ಕ ಇದ್ದರು.
ಇದನ್ನು ಓದಿ : ರಾಜ್ಯ ಕಸಾಪ ಅಧ್ಯಕ್ಷ ಮಹೇಶ ಜೋಶಿ ಸವಲತ್ತು ವಾಪಾಸ್.