ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) :  ಮುರ್ಡೇಶ್ವರದ  ಜನತಾ ವಿದ್ಯಾಲಯದ ಎದುರಿಗೆ ಇರುವ ನಾಯ್ಕ ರೆಸಿಡೆನ್ಸಿ ಲಾಡ್ಜ್ ಮೇಲೆ ಪೊಲೀಸರು ದಾಳಿ (Police Raid) ನಡೆಸಿದ್ದಾರೆ.

ಮಹಿಳೆಯರನ್ನ  ಇಟ್ಟು   ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ದೂರಿನ ಹಿನ್ನಲೆಯಲ್ಲಿ  ದಾಳಿ ನಡೆಸಲಾಗಿದೆ. ಸಿಪಿಐ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ  ಪಿ.ಎಸ್ಐ  ಹನಮಂತ ಬಿರಾದಾರ ಮತ್ತು ಸಿಬ್ಬಂದಿಗಳು  ದಾಳಿ ನಡೆಸಿದಾಗ   ಕಲ್ಕತ್ತಾ ಮೂಲದ ಮಹಿಳೆಯನ್ನು ಬೆಂಗಳೂರುನಿಂದ ಕರೆತಂದು ಇರಿಸಲಾಗಿತ್ತು. ಮಹಿಳೆಯ ಆರ್ಥಿಕ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ನಡೆಸಲು ಮುಂದಾಗಿದ್ದರು. ಆಕೆಯನ್ನ ಪೊಲೀಸರು ರಕ್ಷಣೆ(Recsue) ಮಾಡಿದ್ದಾರೆ.

ಪ್ರಕರಣ ಸಂಬಂಧ ಸಿದ್ದಾಪುರದ ಗಣೇಶ್ ನಾಯ್ಕ, ನಾಯ್ಕ್ ಲಾಡ್ಜ್ ಮಾಲೀಕ ವಿನಾಯಕ್ ಮಹಾದೇವ ನಾಯ್ಕ ಮತ್ತು  ರೂಮ್ ಬಾಯ್  ಆಕಾಶ್ ಅನಿಲ್ ಮುರ್ಡೇಶ್ವರ ಎಂಬುವವರನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಕೃತ್ಯಕ್ಕೆ  ಬಳಸಿದ ನಗದು 4630 ರೂ., 2 ಮೊಬೈಲ್ ಫೋನ್ , 10 ಕಾಂಡೊಮ್ ಪ್ಯಾಕೆಟ್, ಲಾಡ್ಜ್ ರಿಜಿಸ್ಟರ್ ಮತ್ತುಒಂದು ಮೋಟಾರ್ ಸೈಕಲ್  ವಶಕ್ಕೆ ಪಡೆಯಲಾಗಿದೆ. ನೊಂದ ಮಹಿಳೆಯನ್ನು ಸಾಂತ್ವನ ಕೇಂದ್ರ ಭಟ್ಕಳಕ್ಕೆ ಬಿಡಲಾಗಿದೆ. ಮುರ್ಡೇಶ್ವರ ಠಾಣೆಯಲ್ಲಿ (Murdeshwar Police Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಮಳೆಯ ಹಿನ್ನಲೆಯಲ್ಲಿ ನಾಳೆ ಶಾಲೆಗಳಿಗೆ ರಜೆ ಘೋಷಣೆ.

ಬಸ್ ಪಲ್ಟಿ. ಪ್ರಪಾತದ ದುರಂತದಿಂದ ಸ್ವಲ್ಪದರಲ್ಲಿ ಪಾರಾದ ಪ್ರಯಾಣಿಕರು.

ಭಟ್ಕಳದಲ್ಲಿ ಮನೆ ದೋಚಿದ ಕಳ್ಳರು. ಅಪಾರ ಪ್ರಮಾಣದ ಆಭರಣಗಳ ಕಳ್ಳತನ