ಭಟ್ಕಳ(BHATKAL) : ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನ (INDEPENDENT DAY) ಸ್ವಾತಂತ್ರ್ಯದ ಹಬ್ಬದಂತೆ ಸಂಭ್ರಮದಂತೆ ಆಚರಿಸಲಾಯಿತು.
ಪಂಚಾಯತ್ ಅಧ್ಯಕ್ಷ ಭಾಸ್ಕರ್ ಈಶ್ವರ ದೈಮನೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು ಮಹಾತ್ಮ ಗಾಂಧೀಜಿ ಸರ್ದಾರ್ ವಲ್ಲಬಾಯ್ ಪಟೇಲ್ ನೇತಾಜಿ ಸುಭಾಷ್ ಚಂದ್ರ ಬೋಸ್ ಎಲ್ಲ ನಾಯಕರ ವಿಷಯಗಳು ಹೋರಾಟವನ್ನು ನೆನಪಿಸುತ್ತವೆ. ಇತಿಹಾಸಗಳಲ್ಲಿ ಪ್ರಾಮುಖ್ಯತೆ ಪಡೆಯದೆ ಎಷ್ಟು ಮಂದಿ ಹೋರಾಟಗಾರರು ತ್ಯಾಗ ಬಲಿದಾನಗಳನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಮಾಡಿದ್ದಾರೆ. ಅವರೆಲ್ಲರ ಪರಿಶ್ರಮದಿಂದ ದೇಶ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ. ಆ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಂಡು ಗೌರವಿಸಿಕೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸೋಣ ಸ್ವಾತಂತ್ರ್ಯದ ಹಿರಿಮೆ ಗರಿಮೆಯನ್ನು ಗೌರವಿಸೋಣ ಎಂದರು.
ಪ್ರಾಸ್ತಾವಿಕವಾಗಿ ಆರ್ ಕೆ ನಾಯ್ಕ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸ್ವಾತಂತ್ರ್ಯ ಪಡೆಯುವಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.
ಅಂದು ಸಂಜೆ ಶಿರಾಲಿಯ ಅಶೋಕ ಮೈದಾನದಲ್ಲಿ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೊಂಡಿತ್ತು. ರಾಜ್ಯ ಪ್ರಶಸ್ತಿ ವಿಜೇತ ವೈದ್ಯ ಡಾ. ಅರುಣ್ ಕುಮಾರ್, ಇತ್ತೀಚಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಿವೃತ್ತಿ ಹೊಂದಿದ ವಿ ಡಿ ಮೊಗೇರ್, ರಾಜ್ಯ ಪೊಲೀಸ್ ಇಲಾಖೆಯ ಸ್ಥಳ ಪರಿಶೀಲನ ಅಧಿಕಾರಿ ಮಂಜುನಾಥ ನಾಯ್ಕ ಗುಡಿಹಿತ್ತಲು, ಮಹಿಳಾ ಪೊಲೀಸ್ ಅಧಿಕಾರಿ ವೀಣಾ ಚಿತ್ರಾಪುರ, ಮಾಜಿ ಸೈನಿಕ ಕೃಷ್ಣಮೂರ್ತಿ ನಾಯ್ಕ, ಕ್ರೀಡಾಪಟು ಕವೀಶ್ ನಾಯ್ಕ ಇವರನ್ನು ಶಿರಾಲಿ ಗ್ರಾಮ ಪಂಚಾಯತ್ ದಾನಿಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅವರ ಸಾಧನೆಯನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಜ್ಯೋತಿ ಮಾದೇವ ನಾಯ್ಕ್, ಮಾಜಿ ಉಪಾಧ್ಯಕ್ಷ ಆರ್ ಕೆ ನಾಯ್ಕ, ಮಾಜಿ ಸೈನಿಕ ಎಂಡಿ ಪಕ್ಕಿ, ಮಾಜಿ ಜಿ ಪಂ. ಸದಸ್ಯೆ ಶ್ರೀಮತಿ ಸುಭದ್ರಾ ದೇವಾಡಿಗ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಂತೋನಿ ಡಿಕೋಸ್ಟ, ಮಾದೇವಿ ದೇವೇಂದ್ರ ನಾಯ್ಕ್, ರೇವತಿ ನಾಯ್ಕ್, ಗಣಪತಿ ನಾಯ್ಕ, ನಜೀಬ್ ಅಬ್ದುಲ್ ಖಾದಿರ್, ಜೈರಾಜ್ ಮೊಗೇರ, ಅಣ್ಣಪ್ಪ ನಾಯ್ಕ್, ಜನಾರ್ಧನ್ ದೇವಾಡಿಗ, ಕುಮಾರ್ ನಾಯ್ಕ್, ಶನಿಯಾರ್ ನಾಯ್ಕ್, ವೆಂಕಟೇಶ್ ಸಂಕ್ರು ನಾಯ್ಕ್ ಹಾಗೂ ಗ್ರಾ ಪಂ ನ ಸದಸ್ಯರು, ಪ್ರೀತಿ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು, ಶಿರಾಲಿ ಮಾದರಿ ಶಾಲೆ, ಜನತಾ ವಿದ್ಯಾಲಯ, ಚಿತ್ರಾಪುರ ಶಾಲೆಯ ಶಿಕ್ಷಕರು ವಿದ್ಯಾರ್ಥಿ ಗಳು, ಸಂಜೀವಿನಿ ಒಕ್ಕೂಟ ಸದಸ್ಯರು ಭಾಗವಹಿಸಿದ್ದರು.
ಶಿರಾಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗರಾಜ್ ವಿ ಸ್ವಾಗತಿಸಿದರು, ಮಾಜಿ ಅಧ್ಯಕ್ಷೆ ರೇವತಿ ರವಿಶಂಕರ್ ನಾಯ್ಕ ವಂದಿಸಿದರು. ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.