ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೋಯಿಡಾ(Joida) : ತಾಲೂಕು ಕೇಂದ್ರದಿಂದ ಸುಮಾರು ಎಂಟು ಕಿಮೀ ದೂರದಲ್ಲಿರುವ ಗುಂದ- ಉಳವಿ(Gunda-Ulavi) ಮುಖ್ಯ ರಸ್ತೆಯ ಮಾರ್ಗದ ಕೈಟಾ ಬಳಿ ಸೇತುವೆ ಪಕ್ಕದಲ್ಲಿ ಕುಸಿತ(Collapse) ಉಂಟಾಗಿದೆ.
ಸುರಿಯುತ್ತಿರುವ ಬಾರೀ ಮಳೆಗೆ ಗಟಾರದ ನೀರೆಲ್ಲ ರಸ್ತೆಗೆ ಬಂದು ಈ ಕುಸಿತಕ್ಕೆ ಕಾರಣವಾಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಜೊಯಿಡಾ- ದಾಂಡೇಲಿ ರಸ್ತೆ(Joida-Dandeli) ಇದಾಗಿದ್ದು,ನಂದಿಗದ್ದ ಗ್ರಾಮ ಪಂಚಾಯತ್(Nandigadda Grama Panchayat) ವ್ಯಾಪ್ತಿಗೆ ಬರಲಿದೆ. ಗುಂದ(Gunda), ಉಳವಿ(Ulavi), ಸಾರಿಗೆಯ ದಾಂಡೇಲಿ, ಶಿರಸಿ(Sirsi), ಬೈಲಹೊಂಗಲ(Bailahongal), ಬೆಳಗಾವಿಯ ಬಸ್ ಗಳು(Belagavi Bus) ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಆದರೆ ಮುಂದೆ ಸಂಪೂರ್ಣ ಕುಸಿದರೇ ಅಪಾಯ ಎದುರಾಗಲಿದೆ.
ಹೀಗಾಗಿ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಳೆದ ವರ್ಷ ಕೂಡ ಇದೇ ರಸ್ತೆಯ ಅವುರ್ಲಿ ಎಂಬಲ್ಲಿ ಸೇತುವೆ ಕುಸಿದು ಆರು ತಿಂಗಳುಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡು ಜನಸಾಮಾನ್ಯರು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದರು. ಆಗ ಬದಲಿ ಮಾರ್ಗವಾಗಿ ಜೋಯಿಡಾ ಕುಂಬಾರವಾಡಾ ಉಳವಿ(Kumbarwada-Ulavi) ಮಾರ್ಗದಲ್ಲಿ ಗುಂದ ಪಂಚಾಯತಕ್ಕೆ ಸಂಪರ್ಕ ಕಲ್ಪಿಸಲಾಗಿತ್ತು. ಈಗ ಕುಸಿಯುವ ಹಂತದಲ್ಲಿರುವ ಕೈಟಾ ಸೇತುವೆಗೆ ಕೂಡಲೇ ಕಾಯಕಲ್ಪ ವನ್ನು ಮಾಡಲು ಲೋಕೋಪಯೋಗಿ ಇಲಾಖೆ ಮುಂದಾಗಬೇಕೆಂದು ಈ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನು ಓದಿ : ಕಾರವಾರದಲ್ಲಿ ಮತ್ತೊಂದು ಹಣಕಾಸು ಸಂಸ್ಥೆಯಿಂದ ಗ್ರಾಹಕರಿಗೆ ಪಂಗನಾಮ ?