ಉಡುಪಿ(UDUPI) : ಅಮೇರಿಕ(AMERICA),  ಜರ್ಮನಿಯಲ್ಲಿ (GERMANY) ಕೆಲಸ ಮಾಡಿದ್ದ ಇಂಜಿನಿಯರ್(ENGINEER) ಪದವೀಧರರೋರ್ವರು ಇದೀಗ ಅಸಹಾಯಕರಾಗಿದ್ದಾರೆ.

ಶಿರಸಿ ಮೂಲದ(SIRSI Native) ರಮೇಶ್ ಪಾಡುರಂಗ ಪಾವಸ್ಕರ (65 )ಎಂಬುವವರೇ ಸಹಾಯ ಯಾಚಿಸಿದ್ದಾರೆ. ಹೊರದೇಶಗಳಲ್ಲಿ(FOREIGN) ಕೆಲಸ ಮಾಡಿ 10ಕ್ಕೂ ಹೆಚ್ಚು ಭಾಷೆಗಳನ್ನು ಕರಗತ ಮಾಡಿಕೊಂಡ ಹಿರಿಯ ವ್ಯಕ್ತಿಯ ಪರಿಸ್ಥಿತಿ ಈಗ ಅಯೋಮಯವಾಗಿದೆ.

ರಮೇಶ್ ಅವರ ವಿನಂತಿ ಮೇರೆಗೆ ವಿಶು ಶೆಟ್ಟಿ ಅಂಬಲಪಾಡಿ ಅವರು ಬೈಲೂರಿನ “ಹೊಸಬೆಳಕು” (HOSABELAKU) ಆಶ್ರಮದಲ್ಲಿ ಆಶ್ರಯ ಕಲ್ಪಿಸಿದ್ದಾರೆ. ತನ್ನ ಸಹೋದರಿ ವೈದ್ಯೆಯಾಗಿ ಸೇವೆ ಮಾಡುತ್ತಿರುವುದಾಗಿ ನೊಂದ ವ್ಯಕ್ತಿ ಮಾಹಿತಿ ನೀಡಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಒಂಟಿಯಾಗಿ ಎಲ್ಲವನ್ನು ಕಳೆದುಕೊಂಡು ಆಶ್ರಯ ಇಲ್ಲದವನಾಗಿ ಈ  ಪರಿಸ್ಥಿತಿ ಬಂದಿದೆ ಎಂದು ದುಃಖಿಸಿದ್ದಾರೆ.

ಆಶ್ರಮಕ್ಕೆ ದಾಖಲಿಸಲು ರಾಮದಾಸ್ ಉದ್ಯಾವರ ಸಹಕಾರ ನೀಡಿದ್ದಾರೆ. ಸಂಬಂಧಿಕರು ಹೊಸಬೆಳಕು ಆಶ್ರಮ ಸಂಪರ್ಕಿಸುವಂತೆ ಕೋರಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆಗೆ (UDUPI TOWN STATION ) ಮಾಹಿತಿ ನೀಡಲಾಗಿದೆ.

ಇದನ್ನು ಓದಿ : ಭಟ್ಕಳ ಪಟ್ಟಣದಲ್ಲಿ ಕೆಲವೆಡೆ ಬಂದ್

ಭಟ್ಕಳದಲ್ಲಿ ತಂಜಿಮ್ ನೇತೃತ್ವದಲ್ಲಿ ಪ್ರತಿಭಟನೆ

ಹಂತಕರ ಜಾಡು ಹಿಡಿದು ಅರಣ್ಯ ಇಲಾಖೆ ದಾಳಿ