ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ (Bhatkal): ತಾಲೂಕಿನ ಮುಂಡಳ್ಳಿ‌ ಅರಣ್ಯ(Mundalli Firest ) ಪ್ರದೇಶದಲ್ಲಿ  ಜೂಜಾಟ ಆಡುತ್ತಿದ್ದ ಅಡ್ಡೆಯ ಪೊಲೀಸರು ದಾಳಿ(Police Raid) ನಡೆಸಿದ ಘಟನೆ ನಡೆದಿದೆ.

ಭಟ್ಕಳ ಗ್ರಾಮೀಣ ಠಾಣೆ(Bhatkal Rural Police) ಪೊಲೀಸರು ದಾಳಿ ನಡೆಸಿದ್ದು ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ನಾಲ್ವರು ಎಲೆಮಾನವರು  ಪರಾರಿಯಾಗಿದ್ದಾರೆ.  ಪೊಲೀಸ್‌ ನಿರೀಕ್ಷಕ ಮಂಜುನಾಥ ಎ ಲಿಂಗಾರೆಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಲಾಗಿತ್ತು

ಚೌತನಿಯ ಕೆ ಬಿ ರೋಡ್ ನಿವಾಸಿ ರಾಘವೇಂದ್ರ ಮಾರುತಿ ನಾಯ್ಕ (30), ಮುಂಡಳ್ಳಿ ನೆಸ್ತಾರ ನಿವಾಸಿ ಶ್ರೀಧರ ತಿಮ್ಮಪ್ಪ ಮೋಗೇರ (43), ಪುರವರ್ಗ ಮೂಲದ ಹಾಲಿ ಚೌತನಿ ನಿವಾಸಿ ಗೋಪಾಲ ಕೃಷ್ಣ ನಾಯ್ಕ (38) ಮತ್ತು ಮಂಡಳ್ಳಿ ನೆಸ್ತಾರ ನಿವಾಸಿ ಚಂದ್ರಶೇಖರ ಗೋವಿಂದ ಮೋಗೇರ (42) ಬಂಧಿತರಾಗಿದ್ದಾರೆ.

ಬೆಳಕೆ ಚಳ್ಳಜ್ಜಿಮನೆಯ ವಸಂತ ಮೋಗೇರ, ಚೌತನಿಯ ಮಾಸ್ತಿ ನಾಯ್ಕ, ಮುಂಡಳ್ಳಿ ಹೊಸಮನೆಯವರಾದ ನಾಗರಾಜ ಶನಿಯಾರ ನಾಯ್ಕ ಮತ್ತು ನಾಗಪ್ಪ ನಾಯ್ಕ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿತರು ನಿನ್ನೆ ಸಂಜೆ ಸುಮಾರಿಗೆ ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹಣಗಳಿಸುವ ಉದ್ದೇಶದಿಂದ ಇಸ್ಪೀಟ್ ಎಲೆಗಳ ಮೇಲೆ ಹಣ ಪಂಥವಾಗಿ ಕಟ್ಟಿ ಅಂದ‌ರ್ ಬಾಹ‌ರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದರು‌.

ದಾಳಿಯ ಸಂದರ್ಭದಲ್ಲಿ 2,69,230  ರೂಪಾಯಿಗಳ ಮೌಲ್ಯದ ನಾಲ್ಕು ಮೊಬೈಲ್, 5 ದ್ವಿಚಕ್ರ ವಾಹನ ಮತ್ತು1250 ರೂ ನಗದು ಸಹಿತ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗ್ರಾಮೀಣ ಠಾಣೆಯಲ್ಲಿ (Rural Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ರಸ್ತೆ ಕುಸಿತ ಹಿನ್ನಲೆ. ಬದಲಿ ಮಾರ್ಗ ಅನುಸರಿಸಲು ಸೂಚನೆ.

ವ್ಯವಹಾರಕ್ಕಾಗಿ ಹಣ ಪಡೆದು ವಂಚಿಸುತ್ತಿದ್ದ ಭಟ್ಕಳದ ವ್ಯಕ್ತಿ ಬಂಧನ.

ಖ್ಯಾತ ಪೋಟೋ ಜರ್ನಲಿಸ್ಟ್ ಪಾಂಡುರಂಗ ಹರಿಕಂತ್ರ ಇನ್ನೂ ನೆನಪು ಮಾತ್ರ.