ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಾವೇರಿ : ಬಾಲಿವುಡ್ ನಟ (Bollywood Actor) ಸಲ್ಮಾನ್ ಖಾನ್‌ಗೆ (Salman khan) ಕೊಲೆ ಬೆದರಿಕೆ ಹಾಕಿದ ಆರೋಪಿಯನ್ನ ಹಾವೇರಿಯಲ್ಲಿ (Haveri) ಬಂಧಿಸಲಾಗಿದೆ.

ರಾಜಸ್ತಾನ ಮೂಲದ ಬಿಕಾರಾಮ್‌ ಎಂಬಾತ ಬಂಧಿತ ಆರೋಪಿ.  ಬಿಕಾರಾಮ್ ಕೂಲಿ ಕೆಲಸಕ್ಕೆಂದು ಒಂದೂವರೆ ತಿಂಗಳ ಹಿಂದೆ ಹಾವೇರಿ ನಗರಕ್ಕೆ ಬಂದಿದ್ದ. ಇಲ್ಲಿನ ಗೌಡರ ಓಣಿಯಲ್ಲಿ ರೂಮ್‌ವೊಂದರಲ್ಲಿ ಕೂಲಿಕಾರರೊಂದಿಗೆ ವಾಸವಾಗಿದ್ದ.

ಮುಂಬೈ ಪೊಲೀಸರ (Mumbai Police) ಮಾಹಿತಿ ಆಧಾರದಲ್ಲಿ ಆರೋಪಿಯನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯನ್ನ ಹಾವೇರಿ ಪೊಲೀಸರು(Haveri Police) ಮುಂಬೈ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇದನ್ನು ಓದಿ : ಪರಿಹಾರ ನೀಡಲು ವಿಳಂಭ. ಕಚೇರಿ ಜಪ್ತಿ

ಮೂವರು ಮಕ್ಕಳನ್ನ ನದಿಗೆ ದೂಡಿ ವ್ಯಕ್ತಿ ಆತ್ಮಹತ್ಯೆ

ಹೆಜ್ಜೇನು ದಾಳಿ. ನಾಲ್ವರು ಆಸ್ಪತ್ರೆಗೆ

ನವೆಂಬರ್ 20ರಂದು ಮದ್ಯದಂಗಡಿ ಬಂದ್