ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಳಗಾವಿ(Belagavi) : 30 ವರ್ಷಗಳ ಹಿಂದಿನ ಪ್ರಕರಷವೊಂದರಲ್ಲಿ ಜಿಲ್ಲಾಧಿಕಾರಿಗಳ ಕಾರು ಜಪ್ತಿಯಾದ(Car Seaz) ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಸಣ್ಣ ನೀರಾವರಿ ಇಲಾಖೆಯ(Minor Irrigation Department) ಬ್ಯಾರೆಜ್ ನಿರ್ಮಿಸಿದ್ದ ಗುತ್ತಿಗೆದಾರನಿಗೆ ಬಿಲ್ ಬಾಕಿ ಉಳಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶಿಸಿದರೂ(Court Order) ಹಾನಿಯ ಪರಿಹಾರ ನೀಡದ್ದಕ್ಕೆ ಕಾರು ಜಪ್ತಿ ಮಾಡಲಾಗಿದೆ
1992-93ರಲ್ಲಿ ಚಿಕ್ಕೋಡಿಯ ದೂಧಗಂಗಾ ನದಿಗೆ(Doodhganga River) ಗುತ್ತಿಗೆದಾರ ದಿ. ನಾರಾಯಣ ಗಣೇಶ ಕಾಮತ ಎಂಬವರು ಬ್ಯಾರೆಜ್ ನಿರ್ಮಿಸಿದ್ದರು. ಬ್ಯಾರೆಜ್ ನಿರ್ಮಾಣಕ್ಕೆ ಅಗತ್ಯ ಇರುವಷ್ಟು ಸಿಮೆಂಟ್ ಪೂರೈಸಲು ಸಣ್ಣ ನೀರಾವರಿ ಇಲಾಖೆ ವಿಳಂಬ ಮಾಡಿತ್ತು. ಇದರಿಂದ ಗುತ್ತಿಗೆದಾರ ಕಾಮತ ಅವರು ಬಹಳಷ್ಟು ಹಾನಿಗೀಡಾಗಿದ್ದರು. ಷರತ್ತುಬದ್ದ ಗುತ್ತಿಗೆಯಲ್ಲಿ ಬಿಲ್ ಸಿಗದಿದ್ದಕ್ಕೆ ನೀರಾವರಿ ಇಲಾಖೆ ವಿರುದ್ಧ 1995ರಲ್ಲಿ ಗುತ್ತಿಗೆದಾರ ಕಾಮತ ನ್ಯಾಯಾಲಯದ ಮೆಟ್ಟಿಲೇರಿದ್ದರು. ಬೆಳಗಾವಿಯ ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿ, ಗುತ್ತಿಗೆದಾರನಿಗೆ ಪರಿಹಾರ ನೀಡುವಂತೆ ಆದೇಶಿಸಿತ್ತು.
ಬಳಿಕ ಈ ಆದೇಶದ ವಿರುದ್ಧ ಇಲಾಖೆಯವರು ಹೈಕೋರ್ಟ್ ಗೆ ಹೋಗಿದ್ದರು. ನಂತರ ಪ್ರಕರಣ ಮತ್ತೆ ಕೆಳ ಹಂತದ ನ್ಯಾಯಾಲಯಕ್ಕೆ ಬಂದಾಗ, ಗುತ್ತಿಗೆದಾರ ಕಾಮತ್ ಅವರಿಗೆ 11-8-1995ರಿಂದ ಶೇ. 9ರಷ್ಟು ಬಡ್ಡಿ ಸಮೇತ 1.31 ಕೋಟಿ ರೂ. ಪರಿಹಾರ ನೀಡುವಂತೆ ಜುಲೈ 31 2024ರಂದು ಆದೇಶ ಹೊರಡಿಸಿತ್ತು. ಮೂರನೇ ಬಾರಿಗೆ ಮತ್ತೆ ಇದೇ ವರ್ಷ ಏಪ್ರಿಲ್ ನಲ್ಲಿ ನ್ಯಾಯಾಲಯವು ಈ ಮೊತ್ತದ ಶೇ. 50ರಷ್ಟನ್ನು ಜೂನ್ 2ರೊಳಗೆ ಪಾವತಿಸಿವಂತೆ ಆದೇಶ ನೀಡಿತ್ತು. ಈ ಆದೇಶಕ್ಕೂ ಅಧಿಕಾರಿಗಳು ಲಕ್ಷ್ಯ ವಹಿಸಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳ ಕಾರು ಜಪ್ತಿ(Car Seaz) ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ : ಜಿರಲೆ ಸ್ಪ್ರೇ ಸಿಂಪಡಿಸಿ ಕಳ್ಳರನ್ನ ಓಡಿಸಿದ ವನಿತೆ.
	
						
							
			
			
			
			
