ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ವಿಜಯಪುರ (Vijayapur) : ಸಾಲದ ಹಣಕ್ಕಾಗಿ ವ್ಯಕ್ತಿಯನ್ನ ಸರಪಳಿಯಿಂದ ಕಟ್ಟಿ ಹಾಕಿದ ಅಮಾನವೀಯ(Unhumanity) ಘಟನೆ ವಿಜಯಪುರ(Vijayapur) ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದಿದೆ.

ಚಾಂದಸಾಬ್ ಮುಲ್ಲಾ ಎನ್ನುವ ವ್ಯಕ್ತಿ ಕಾಲಿಗೆ ಸರಪಳಿ ಬಿಗಿದು ಅಮಾನವೀಯ ಕೃತ್ಯ ಏಸಗಲಾಗಿದೆ. ಕುಮಾರಗೌಡ ಬಿರಾದಾರ್ ಎಂಬಾತನೇ ಸರಪಳಿ‌ ಹಾಕಿ‌ ಬಂಧಿಸಿದ ವ್ಯಕ್ತಿ. ಚಾಂದಸಾಬ್ ಮಾಲೀಕ ಕುಮಾರಗೌಡ ಬಳಿ 20ಸಾವಿರ ಸಾಲ ಪಡೆದಿದ್ದ ಎನ್ನಲಾಗಿದೆ. ಹಣ ವಾಪಸ್ ಕೊಡದೆ ಇರೋದಕ್ಕೆ ಕುಮಾರಗೌಡ ಸರಪಳಿಯಿಂದ ಕಟ್ಟಿ ಹಾಕಿದ್ದಾನೆ.

ಕುಮಾರಗೌಡ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಬಳಿಕ ಸರಪಳಿ ಬಿಚ್ಚಿದ್ದಾನೆ. ಚಡಚಣ ಪೊಲೀಸ್ ಠಾಣೆಯಲ್ಲಿ(Chadachana Police Station) ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಹಳೆ ಪ್ರಕರಣವೊಂದರಲ್ಲಿ ಪರಿಹಾರ ನೀಡದಕ್ಕೆ  ಜಿಲ್ಲಾಧಿಕಾರಿ ಕಾರು ಜಪ್ತಿ.

ಜಿರಲೆ ಸ್ಪ್ರೇ ಸಿಂಪಡಿಸಿ ಕಳ್ಳರನ್ನ ಓಡಿಸಿದ ವನಿತೆ.

ಮುಂಬೈ ಮೂಲದ ವ್ಯಕ್ತಿಯಿಂದ ಅನಂತಕುಮಾರ ಹೆಗಡೆಗೆ ಬೆದರಿಕೆ ಪತ್ರ.