ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಹರಿಯಾಣ (Haryana): ಜೋಡಿಯೊಂದು ಪರಸ್ಪರ ಒಪ್ಪಿಕೊಂಡು   ಕೇವಲ ಒಂದೇ ಒಂದು ರೂಪಾಯಿಗೆ ಮದುವೆ(One Rupees Marriage) ಆಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ

ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಮದುವೆಯಾಗುವವರಿಗೆ ಇದು ಸಂದೇಶ (Marriage Message) ಕೂಡ ಆಗಿದೆ. ಹರಿಯಾಣದ ಚಕ್ರಿಯಾದ ಡಾ. ರಮೇಶ್ ರೋಹಿಲಾ ಹಾಗೂ ಭಿವಾನಿಯ ಡಾ. ಅರುಣಾ ಹೊಸ ದಾಖಲೆ ಬರೆದಿದ್ದಾರೆ. ಬಡತನದ ಬೇಗೆಯಲ್ಲಿ ಬೆಂದ, ಕಡು ಕಷ್ಟ ಅರಿತು ಬೆಳೆದ ಅರುಣಾ ಬಾಲ್ಯದಿಂದಲೂ ಒಂದೇ ನಿರ್ಧಾರದಲ್ಲಿದ್ದರು. ಯಾರು ವರದಕ್ಷಿಣೆ ಕೇಳೋದಿಲ್ಲವೋ? ಅವನನ್ನೆ ಮದುವೆಯಾಗೋದು ಎಂಬ ನಿರ್ಧಾರಕ್ಕೆ ಬಂದಿದ್ದರು. ಹಾಗೆಯೇ ಮೆಡಿಕಲ್‌(Medical) ಓದುವಾಗ ಸಿಕ್ಕ ಹುಡುಗನೇ ಡಾ. ರಮೇಶ್ ಎಂಬಾತನನ್ನ ಮದುವೆಯಾಗಲು ಇಚ್ಚಿಸಿದರು.

ರೈತ (Farmers) ಸಂತೋಷ್‌ ಎಂಬುವವರ ಮಗಳಾದ ಅರುಣಾ, ತನ್ನ ತಂದೆಯ ಬಳಿ ಮದುವೆಯಾಗುವ ವಿಷಯ ಪ್ರಸ್ತಾಪಿಸಿದ್ದಳು. ತಂದೆ ಕೂಡ ಹುಡುಗ ರಮೇಶ್ ಬಳಿ ತನ್ನ ಪರಿಸ್ಥಿತಿ ಬಗ್ಗೆ ಹೇಳಿದ್ದಾರೆ. ಆಗ ರಮೇಶ್ ಪೋಷಕರು ನಮಗೆ ನಿಮ್ಮಿಂದ ಒಂದು ನಯಾಪೈಸೆಯೂ ಬೇಕಿಲ್ಲ ಅಂದಿದ್ದಾರೆ. ಹೀಗಾಗಿ ಅತ್ಯಂತ ಸರಳವಾಗಿ ಮನೆಯಲ್ಲೇ ಮದುವೆ ಆದ ಜೋಡಿ ತಮ್ಮ ತಮ್ಮ ಬಟ್ಟೆಗಳಿಗೆ ತಾವೇ ಖರ್ಚು ಮಾಡಿಕೊಂಡಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದರೂ(Doctors) ಸಹ ಅದ್ಧೂರಿಯಾಗಿ ಹಣ ಖರ್ಚು ಮಾಡದೇ  ಪ್ರೀತಿಯಿಂದ  ಮಾವ  ಕೊಟ್ಟ ಒಂದು ಹಣವನ್ನ ಸ್ವೀಕರಿಸಿದ್ದಾರೆ. ನೀಡುವಾಗಲು ಸಹ ತಂದೆ ಹೇಳಿದ್ದು ಒಂದೇ ಮಾತು, ಮಗಳ ಶಿಕ್ಷಣಕ್ಕಾಗಿ ಖರ್ಚು ಮಾಡಿದ್ದೀನಿ. ನನ್ನ ಬಳಿ ಹಣವಿಲ್ಲ. ಆದರೇ, 50 ಕೆಜಿ ಬಂಗಾರದ ಮಗಳನ್ನೇ ಕೊಡ್ತಿದ್ದೀನಿ ಅನ್ನೋ ಮೂಲಕ ಭಾವುಕರಾಗಿದ್ದಾರೆ. ಅಂತೂ ಈ ಮದುವೆ ಸಮಾಜಕ್ಕೆ ಸಂದೇಶ ನೀಡಿದೆ.

ಇದನ್ನು ಓದಿ : ಭಟ್ಕಳದ ಸಂಜನಾ ನಾಯ್ಕಗೆ ಮಿಸ್  ಗ್ರಾಂಡ್ ಸೌತ್ ಇಂಡಿಯಾ ಪ್ಯಾಶನ್ ಶೋ ಕಿರೀಟ.

ಸ್ವಚ್ಛ ಅಘನಾಶಿನಿಗೆ ಭಕ್ತಿಯ ಆರತಿ. ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು ಯುವಾ ಬ್ರಿಗೇಡ್.

ಮಹಾಕುಂಭ ಮೇಳದ ನೆನಪಿಗೆ ಏಕಾಂಗಿಯಾಗಿ ಬಾವಿ ತೋಡಿದ ಮಹಿಳೆ.

ಮಕ್ಕಳ ಮೇಲೆ ಎರಗಿದ ಶ್ವಾನ. ಮೂವರಿಗೆ ಗಾಯ.