ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ನಗರದ ಪಿಕಳೆ ರಸ್ತೆಯಲ್ಲಿ ಬೃಹತ್ ಗಾತ್ರದ  ಮರ ಬುಡಸಮೇತ ಬಿದ್ದು ಕಾರಿ‌ನಲ್ಲಿದ್ದ  ಮಹಿಳೆಯೋರ್ವಳು ಸಾವನ್ಮಪ್ಪಿದ್ದಾಳೆ.

ಕಾರವಾರ(Karwar) ತಾಲೂಕಿನ ಮಲ್ಲಾಪುರ ಮೂಲದ(Mallapur  native) ಲಕ್ಷ್ಮೀ ನಾರಾಯಣ ಮಮ್ತೆಕರ (55) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಭಾನುವಾರ ಮಧ್ಯಾಹ್ಯ ಎರಡು ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದೆ.

ಲಕ್ಷ್ಮೀ ತನ್ನ ಮಗ ಮತ್ತು ಸೊಸೆಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಮಗ ಮತ್ತು ಸೊಸೆ ಬಳಿಕ ಕಾರು ಚಾಲಕ ಆಸ್ಪತ್ರೆಗೆ ಹೋಗಿದ್ದರು. ಲಕ್ಷ್ಮೀ ಕಾರಿನಲ್ಲಿ ಕುಳಿತುಕೊಂಡಿದ್ದಳು. ಈ ಸಂದರ್ಭದಲ್ಲಿ ಮರ ಬುಡ ಸಮೇತ ಕಾರಿನ ಮೇಲೆ ಬಿದ್ದಿದೆ. ಪರಿಣಾಮವಾಗಿ ಕಾರು ಜಖಂ ಆಗಿತ್ತು.

ಸ್ಥಳಕ್ಕೆ ಅಗ್ನಿಶಾಮಕ ದಳ(Fire brigade) ಸಿಬ್ಬಂದಿಗಳು ಹಾಗೂ ಪೊಲೀಸರು ದೌಡಾಯಿಸಿ ಮಹಿಳೆಯನ್ನ ರಕ್ಷಿಸುವ ಕಾರ್ಯಾಚರಣೆ ನಡೆಸಿದ್ದರು. ಕಾರಿನ ಮೇಲೆ ಬಿದ್ದ ಮರವನ್ನ ತೆರವುಗೊಳಿಸಲು ಮುಂದಾದರು. ಕಾರಿನಲ್ಲಿದ್ದ ಮಹಿಳೆ ಗಂಬೀರವಾಗಿ ಗಾಯಗೊಂಡ ಸ್ಥಿತಿಯಲ್ಲಿದ್ದಳು. ಆಕೆಯನ್ನ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಕಾರವಾರ ನಗರದಲ್ಲಿ ಅದೇಷ್ಟೋ ಸಂಖ್ಯೆಯಲ್ಲಿ ಹಳೆಯ ದೊಡ್ಡದಾದ ಮರಗಳಿವೆ. ಮಳಡಗಾಲದಲ್ಲಿ ಆಗಾಗ ಕೊಂಬೆ ಬೀಳುತ್ತಿದೆ. ಮೊನ್ನೆಮೊನ್ನೆಯಷ್ಟೆ ಕೋರ್ಟ್ ರಸ್ತೆ ಬದಿಯಲ್ಲಿ ತೆಂಗಿನ ಮರ ಬಿದ್ದು ಕಾರ್ಮಿಕನೋರ್ವ ಬಚಾವಾಗಿದ್ದ. ಅದಕ್ಕೂ ಮೊದಲು ಜನತಾಬಜಾರ್ ಮುಂದೆ ಮರದ ಕೊಂಬೆ ಬಿದ್ದು ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಳು

ಹಳೆಯ ಮರಗಳಿಗೆ ಮುಕ್ತಿ ಕಾಣಿಸಲು ನಗರಸಭೆ ಮುಂದಾಗಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿತ್ತು. ಆದರೆ ಅರಣ್ಯ ಇಲಾಖೆ ಅನುಮತಿ ನೀಡದಿರುವುದು ಮತ್ತು ಪರಿಸರವಾದಿಗಳ ಆಕ್ಷೇಪದಿಂದಾಗಿ ಮರಗಳನ್ನ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ಆಯುಕ್ತರಾದ ಜಗದೀಶ್ ಹುಲಿಗೆಜ್ಜಿ ತಿಳಿಸಿದ್ದಾರೆ.

ಇದನ್ನು ಓದಿ : ಸೆಕ್ಯೂರಿಟಿ ಸಮಯಪ್ರಜ್ಞೆಯಿಂದ ಅರೆಶಿರೂರಿನಲ್ಲಿ ತಪ್ಪಿದ ಬಾರೀ ಕಳ್ಳತನ ಯತ್ನ.

ಹಳೆ ಪ್ರಕರಣವೊಂದರಲ್ಲಿ ಪರಿಹಾರ ನೀಡದಕ್ಕೆ  ಜಿಲ್ಲಾಧಿಕಾರಿ ಕಾರು ಜಪ್ತಿ.

ಜಿರಲೆ ಸ್ಪ್ರೇ ಸಿಂಪಡಿಸಿ ಕಳ್ಳರನ್ನ ಓಡಿಸಿದ ವನಿತೆ.