ಅಂಕೋಲಾ(Ankola) : ತಾಲೂಕಿನ ಶಿರೂರಿನಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯ (Searching Operations) ಬಗ್ಗೆ ಕುತೂಹಲ ಹೆಚ್ಚಾಗಿದೆ. ಇಂದು ಬೆಳಿಗ್ಗೆಯಿಂದ ಮುಳುಗುತಜ್ಞ ಈಶ್ವರ್ ಮಲ್ಪೆ (ISHWAR MALPE) ಅವರ ಪ್ರಯತ್ನದಿಂದ ಟ್ಯಾಂಕರ್ ವಾಹನದ ಎರಡು ಭಾಗವನ್ನ ಮೇಲಕ್ಕೆತ್ತಲಾಗಿದೆ.

  ಗಂಗಾವಳಿ(GANGAVALI) ನದಿಯಲ್ಲಿ ನಿನ್ನೆಯಿಂದ ಪುನಃ ಕಾರ್ಯಾಚರಣೆಯನ್ನ ಮುಂದುವರಿಸಲಾಗಿದೆ. ಘಟನೆ ನಡೆದು 65 ದಿನ ಕಳೆದಿವೆ.  ಈ ಹಿಂದೆ ಒಂದು ತಿಂಗಳ ಕಾಲ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿದ್ದವು. ನಾಪತ್ತೆಯಾಗಿರುವ ಮೂವರಿಗಾಗಿ ಸರ್ಕಾರ ಸುಮಾರು ಕೋಟಿ ರೂ. ಖರ್ಚು ಮಾಡಿ ಡ್ರೆಜಿಂಗ್ ಯಂತ್ರಗಳ ಮೂಲಕ ಮತ್ತೆ ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ಇಂದು ಬೆಳಿಗ್ಗೆಯಿಂದ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಗಂಗಾವಳಿ ನದಿಯಲ್ಲಿ ಶೋಧಿಸಿದರು. ಕೆಲವೊಂದು ವಸ್ತುಗಳನ್ನು ಪತ್ತೆ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.  ಕಾರವಾರ ಶಾಸಕ ಸತೀಶ್ ಸೈಲ್(SATISH SAIL), ಮಂಜೇಶ್ವರ್ ಶಾಸಕ ಅಶ್ರುಫ್ ಅಲಿ(MLA ASRUF ALI) ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಾರಾಯಣ ಆಗಮಿಸಿ ಪತ್ತೆಯಾದ ವಸ್ತುಗಳನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ಆರಂಭಿಸಿದರು.

ಬೆಳಿಗ್ಗೆಯೇ ಕೇರಳದ(KERAL) ಅರ್ಜುನ್ ಇರುವ ಟ್ರಕ್ ನ ಮರದ ದಿಮ್ಮಿಯೊಂದನ್ನ ಈಶ್ವರ್ ಮಲ್ಪೆ ಮೇಲಕ್ಕೆತ್ತಿ ತಂದಿದ್ದರು ಸಂಜೆ ವೇಳೆ ಪತ್ತೆಯಾಗಿರುವ ವಾಹನದ ಭಾಗಗಳನ್ನ ಕ್ರೇನ್ ಮೂಲಕ ಎತ್ತುವ ಕಾರ್ಯ ನಡೆಸಲಾಯಿತು.   ಆಗ ಟ್ಯಾಂಕರ್ ಮುಂಬದಿಯ ಎರಡು ಚಕ್ರ ಇರುವ ಭಾಗವನ್ನ ಮೇಲಕ್ಕೆತ್ತಲಾಯಿತು.  ಬಳಿಕ ಮತ್ತೊಂದು ಸ್ಥಳದಲ್ಲಿ ವಾಹನದ ಕ್ಯಾಬಿನ್ ಸಿಕ್ಕಿತು.

ಘಟನೆಯಲ್ಲಿ ಕಣ್ಮರೆಯಾದ ಜಗನ್ನಾಥ ನಾಯ್ಕ, ಲೋಕೇಶ್ ನಾಯ್ಕ, ಅರ್ಜುನ್ ಅವರ ಮೃತದೇಹದ ಪತ್ತೆಗಾಗಿ ನಾಳೆ ಕೂಡ  ಶೋಧ ನಡೆಯಲಿದೆ.