ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal): ಮೈಸೂರಿನ ಯೂತ್ ಎಫರ್ಟ್ಸ್ ಫಾರ್ ಸೊಸೈಟಿ ಟ್ರಸ್ಟ್ (YES) ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ ಕರ್ನಾಟಕ ಶೈಕ್ಷಣಿಕ ಪ್ರಶಸ್ತಿ 2025 ರ ರಾಜ್ಯಶಾಸ್ತ್ರದಲ್ಲಿ ಅತ್ಯುತ್ತಮ ಅಸೋಸಿಯೇಟ್ ಪ್ರೊಫೆಸರ್”(“Best Associate Professor In Political) ಪ್ರಶಸ್ತಿಯನ್ನು ಭಟ್ಕಳದ ಡಾ. ಭಾಗೀರಥಿ ನಾಯ್ಕ ಪಡೆದುಕೊಂಡಿದ್ದಾರೆ.
ಪ್ರಸ್ತುತ ಇವರು ಕುಂದಾಪುರ(Kundapur) ಕೋಟೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು 2009 ರಲ್ಲಿ ಭಟ್ಕಳ ಪ್ರಥಮ ದರ್ಜೆ ಕಾಲೇಜಿನಲ್ಲಿ ತಮ್ಮ ಸೇವೆ ಪ್ರಾರಂಭಿಸಿ ಮೂರುವರೆ ವರ್ಷ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಕಾಲೇಜನ್ನು ನೂತನ ಕಟ್ಟಡಕ್ಕೆ ವರ್ಗಾವಣೆ ಮಾಡಲು ಇವರ ಶ್ರಮ ಕೂಡ ಇತ್ತು. ಈ ಕಾಲೇಜಿಗೆ ಎನ್.ಎ. ಎ. ಸಿ ಯಲ್ಲಿ B++ ಗೌರವವನ್ನು ತಂದು ಕೊಡುವುದರ ಮೂಲಕ 13 ವರ್ಷಗಳ ಭಟ್ಕಳದಲ್ಲಿ(Bhatkal) ಸೇವೆ ಸಲ್ಲಿಸಿ 2023 ರ ಫೆ.2 ರಂದು ಕುಂದಾಪುರ ಕೋಟೇಶ್ವರ ಕಾಲೇಜಿಗೆ ವರ್ಗಾವಣೆಗೊಂಡಿದ್ದು ಸದ್ಯ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಈ ಪ್ರಶಸ್ತಿ ಪಡೆದುಕೊಂಡ ಭಾಗೀರಥಿ ನಾಯ್ಕ ಅವರಿಗೆ ಭಟ್ಕಳದ ಜನತೆ ಹಾಗೂ ಕಾಲೇಜಿನ ಪರವಾಗಿ ಹಾಗೂ ಎಲ್ಲಾ ಸಹದ್ಯೋಗಿಗಳ ಪರವಾಗಿ ಅಭಿನಂದನೆಗಳು ಸಲ್ಲಿಸಿದ್ದಾರೆ.
ಇದನ್ನು ಓದಿ : ಅಂಕೋಲಾದಲ್ಲಿ ಸೇತುವೆ ಮೇಲಿಂದ ಪಲ್ಟಿಯಾಗಿ ಬಿದ್ದ ಬಸ್. ಓರ್ವ ದುರ್ಮರಣ. ಹಲವರಿಗೆ ಗಾಯ.
ಕುಮಟಾದಲ್ಲಿ ಕೋಳಿ ಪಡೆಗೆ ಬಂದವರು ಎಸ್ಕೇಪ್. ಕೋಳಿಗಳಿಗೆ ಶಿಕ್ಷೆ.
ಉತ್ತರಕನ್ನಡ ಮೂಲದ ಪಿಎಸ್ಐ ಆತ್ಮಗೆ ಶರಣು. ಹಿರಿಯ ಅಧಿಕಾರಿಗಳಿಂದ ಪರಿಶೀಲನೆ