ಅಂಕೋಲಾ(ANKOLA) : ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ ದುರಂತದ ಸ್ಥಳದಲ್ಲಿ (TRAGEDY PLACE) ನಡೆಯುತ್ತಿರುವ ಯಂತ್ರಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಮೂರನೇ ಹಂತದ ಶವ ಶೋಧ ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತ ಕೇರಳದ ಅರ್ಜುನ್(KERAL ARJUN) ಮತ್ತು ಟ್ರಕ್ ಸೇರಿ ಇತರೆ ವಾಹನಗಳ ಭಾಗಗಳನ್ನ ಪತ್ತೆ ಮಾಡಿತ್ತು. ಆದರೆ ಜಗನ್ನಾಥ ನಾಯ್ಕ ಮತ್ತು ಲೋಕೇಶ್ ನಾಯ್ಕ ಅವರ ಮೃತದೇಹದ ಭಾಗಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಕಾರ್ಯಾಚರಣೆ ಸಂದರ್ಭದಲ್ಲಿ ಕಳೆದ ಭಾನುವಾರ ಮಾನವನ ಎರಡು ಮೂಳೆಗಳು ಲಭಿಸಿತ್ತಾದರೂ ಅದು ಯಾರದ್ದು ಎಂಬುದು ಗೊತ್ತಾಗಿಲ್ಲ. ಜಗನ್ನಾಥ ಮತ್ತು ಲೋಕೇಶ್ ಅವರದ್ದಿರಬಹುದೆಂದು ಡಿಎನ್ಎ(DNA) ಪರೀಕ್ಷೆಗೆ ಕಳಿಸಲಾಗಿದೆ. ಇದುವರೆಗೆ ವರದಿ ಬಂದಿಲ್ಲ.
ಜುಲೈ ತಿಂಗಳ 16 ನೇ ತಾರೀಕು ಬೆಳಿಗ್ಗೆ ಶಿರೂರಿನಲ್ಲಿ ಭೂಕುಸಿತವಾಗಿ(SHIRURU LANDSLISlDE) ಒಟ್ಟು 11 ಜನ ಮೃತಪಟ್ಟಿದ್ದರು. ಗುಡ್ಡ ಕುಸಿದು ಹೆದ್ದಾರಿ ಬದಿಯಲ್ಲಿದ್ದ ಅಂಗಡಿ, ಮನೆ, ಟ್ಯಾಂಕರ್ ಹಾಗೂ ಲಾರಿಗಳು ಗಂಗಾವಳಿ ನದಿಯಲ್ಲಿ ಆಪೋಶನವಾಗಿತ್ತು. ಪಕ್ಕದ ಉಳುವರೆ ಗ್ರಾಮದ ಮೇಲೂ ಪರಿಣಾಮ ಬೀರಿತ್ತು. ಎರಡು ಹಂತದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಂಟು ದೇಹಗಳು ಸಿಕ್ಕಿತ್ತು. ಮೂವರ ಶವ ಶೋಧ ನಡೆಸಲು ಮೂರನೇ ಹಂತದ ಕಾರ್ಯಾಚರಣೆ ನಡೆಸಿ ಕೇರಳದ ಅರ್ಜುನ್ ಮತ್ತು ಆತನಿದ್ದ ಟ್ರಕ್ ಪತ್ತೆಯಾಗಿತ್ತು. ಅಭಿಷೇನಿಯ ಓಶಿಯನ್ ಸರ್ವಿಸ್ ಕಂಪನಿ ಡ್ರಜ್ಜಿಂಗ್ ಬಾರ್ಜ್ ಮೂಲಕ ಒಟ್ಟು 13 ದಿನದ ಕಾರ್ಯಾಚರಣೆ ನಡೆಸಿತ್ತು.
ಆದರೀಗ ಗಂಗಾವಳಿ ನದಿಯಲ್ಲಿ (GANGAVALI RIVER) ನೀರಿನ ಮಟ್ಟ ಕಡಿಮೆಯಾಗಿದ್ದರಿಂದ ಬಾರ್ಜ್ ಗೆ ನೀರು ಸಾಕಾಗುತ್ತಿಲ್ಲ. ಅಲ್ಲದೇ ಕಂಪನಿ ಪಡೆದುಕೊಂಡ ಅವಧಿ ಮುಕ್ತಾಯವಾಗಿದ್ದರಿಂದ ವಾಪಾಸ್ ತೆರಳಿದೆ.
ಇದೀಗ ಐಆರ್ಬಿ ಕಂಪನಿಯ (IRB COMPANY) ಪೋಕ್ ಲೈನ್ ಬಳಸಿ ಹೋಟಲ್ ಇದ್ದ ಭಾಗದಲ್ಲಿ ಮಣ್ಣು ತೆಗೆದು ಶೋಧ ನಡೆಸಲಾಗುತ್ತಿದೆ. ಇದರಿಂದ ಲಕ್ಷ್ಮಣ ನಾಯ್ಕ ಅವರ ಮನೆಯ ಬಟ್ಟೆಗಳು ಸಿಕ್ಕಿವೆ. ಆದರೆ ನಾಪತ್ತೆಯಾಗಿರುವ ಇಬ್ಬರ ಮೃತದೇಹದ ಭಾಗಗಳು ಲಭಿಸಿದರೆ ಕುಟುಂಬದವರಿಗೆ ಸಮಾಧಾನವಾಗುತಿತ್ತು.
ಇದನ್ನು ಓದಿ,: ಮೀನುಗಾರಿಕಾ ಬಂದರಿನಲ್ಲಿ ಕಾರ್ಮಿಕನ ಮೇಲೆ ಹತ್ತಿದ ವಾಹನ