ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) :  ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಆರೆಂಜ್  ಅಲರ್ಟ್(Red Alert) ಇದ್ದು ಬಾರೀ ಮಳೆಯಾಗುತ್ತಿರುವುದರಿಂದ  ಜಿಲ್ಲೆಯ ಕರಾವಳಿಯ ಐದು  ತಾಲೂಕುಗಳ  ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳಿಗೆ ರಜೆ ನೀಡಲಾಗಿದೆ.

ನಿನ್ನೆಯಿಂದ ಅಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಇಂದು ಸಹ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ  ಕರಾವಳಿ ತಾಲೂಕುಗಳಾದ ಕಾರವಾರ(Karwar), ಅಂಕೋಲಾ(Ankola), ಕುಮಟಾ(Kumta), ಹೊನ್ನಾವರ(Honnavar) ಹಾಗೂ ಭಟ್ಕಳ(Bhatkal) ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಜುಲೈ  ರಜೆ (Holiday) ಘೋಷಿಸಲಾಗಿದೆ.

ಮಕ್ಕಳ ಸುರಕ್ಷತಾ ಹಿತದೃಷ್ಟಿಯಿಂದ ಮತ್ತು  ಯಾವುದೇ ಅನಾನುಕೂಲ ಹಾಗೂ ಅವಘಡಗಳು ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮೇಲಿನ ತಾಲೂಕುಗಳಿಗೆ   ಮಾತ್ರ ರಜೆ ಘೋಷಿಸಿ (Holiday Declared) ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಆದೇಶ ಮಾಡಿದ್ದಾರೆ.

ಈ ಆದೇಶವನ್ನು, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರವಾರ,  ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ  ಕಾರವಾರ ಅವರು ಕಾರ್ಯ ರೂಪಕ್ಕೆ ತರುವಂತೆ ತಿಳಿಸಲಾಗಿದೆ. ಈ ರಜಾ ಅವಧಿಯನ್ನು ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : ಭಟ್ಕಳದ ಡಾ. ಭಾಗೀರಥಿ ನಾಯ್ಕ ಗೆಬೆಸ್ಟ್  ಅಸೋಸಿಯೇಟ್ ಪ್ರೊಫೆಸರ್ ಪ್ರಶಸ್ತಿ

ಅಂಕೋಲಾದಲ್ಲಿ ಸೇತುವೆ ಮೇಲಿಂದ ಪಲ್ಟಿಯಾಗಿ ಬಿದ್ದ ಬಸ್. ಓರ್ವ ದುರ್ಮರಣ. ಹಲವರಿಗೆ ಗಾಯ.