ಕಾರವಾರ: ನಗರದಿಂದ ಕೆರವಡಿ ಮಲ್ಲಾಪುರಕ್ಕೆ ಮಾರ್ಗಕ್ಕೆ ತೆರಳುವ ಬಸ್ ಡೈರೆಕ್ಟಾಗಿ ಬಸ್ ಡಿಪೋಗೆ ತೆರಳಿ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದ ಘಟನೆ ನಡೆದಿದೆ.
ಸೋಮವಾರ ರಾತ್ರಿ ಕಾರವಾರ ಬಸ್ ನಿಲ್ದಾಣದಿಂದ ಹೊರಟ ಬಸ್ ನಲ್ಲಿ ನೂರಾರು ಪ್ರಯಾಣಿಕರಿದ್ದರು. ಬಸ್ ಚಾಲಕ ಡಿಪೋಗೆ ಬಸ್ ತಂದು ನಿಲ್ಲಿಸಿದ್ದರಿಂದ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ಕರ್ತವ್ಯದಲ್ಲಿದ್ದ ಚಾಲಕ ಬಸ್ ಅನ್ನು ಡಿಪೋ ಒಳಗೆ ತಂದು ತನಗೆ ಆರೋಗ್ಯ ಸರಿ ಇಲ್ಲ ಎಂದು ಪ್ರಯಾಣಿಕರ ಬಳಿ ಹೇಳಿದ್ದಾನೆ.
ಪ್ರಯಾಣಿಕರ ಗಲಾಟೆಯಿಂದ ಕೆಲ ಸಮಯದ ನಂತರ ಬೇರೆ ಬಸ್‌ನಲ್ಲಿ ಚಾಲಕ ಈ ಪ್ರಯಾಣಿಕರನ್ನು ಕರೆದೊಯ್ದಿರೋದಾಗಿ ಗೊತ್ತಾಗಿದೆ. ಒಟ್ಟಿನಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.