ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಮದುವೆಯಾದ 18 ತಿಂಗಳಿಗೆ ಮಹಿಳೆಯೊಬ್ಬರು 18ಕೋಟಿ ದುಬಾರಿ ಬೇಡಿಕೆ ಇಟ್ಟಿದ ಬಗ್ಗೆ ವರದಿಯಾಗಿದೆ.
ಕೇವಲ 18 ತಿಂಗಳಲ್ಲಿ ಡಿವೋರ್ಸ್ ಪಡೆಯುತ್ತಿರುವ ಮಹಿಳೆ ಆಸ್ತಿ ಮತ್ತು ಹಣ ಕೇಳಿದ್ದಾರೆ. ಇದನ್ನು ಕೇಳಿ ಖುದ್ದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಶ್ಚರ್ಯಗೊಂಡಿದ್ದಾರೆ. ಪತ್ನಿ ಕೇಳುತ್ತಿರುವ ಜೀವನಾಂಶ ಹಾಗೂ ವಾದ ಎಲ್ಲರ ಗಮನ ಸೆಳೆದಿದೆ. ದುಬಾರಿ ಜೀವನಾಂಶ ಬೇಡಿಕೆಗೆ ಪತ್ನಿ ಕಾರಣವನ್ನು ನೀಡಿದ್ದಾರೆ.
ಆದರೆ ಈ ಜೀವನಾಂಶ ಕೇಳಿದ ಸುಪ್ರೀಂ ಕೋರ್ಟ್ ಜಡ್ಜ್ ಅವರು ಖಡಕ್ ಆದ ಕೆಲ ಪ್ರಶ್ನೆ ಕೇಳಿದ್ದಾರೆ. ಮದುವೆಯಾಗಿ ಕೇವಲ 18 ತಿಂಗಳು ಆಗಿದೆ ಅಷ್ಟೇ, ನೀವು ವಿದ್ಯಾವಂತರೀದ್ದೀರಿ, ಈ ರೀತಿ ಕೇಳುವ ಬದಲು ನೀವೇ ದುಡಿದು ಗಳಿಸಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕೇವಲ 18 ತಿಂಗಳು ಸಂಸಾರ ಮಾಡಿ ಇದೀಗ 12 ಕೋಟಿ ರೂಪಾಯಿ, ಮುಂಬೈನಲ್ಲಿ ಮನೆ ಹಾಗೂ ಕಾರು ಕೇಳುತ್ತಿದ್ದೀರಿ. ಮದುವೆಗೂ ಮೊದಲು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೀದ್ದೀರಿ. ನೀವು ಎಂಬಿಎ ಕೂಡ ಮಾಡಿದ್ದೀರಿ. ನೀವು ಮದುವೆಯಾದ ಮೇಲೆ ಕೆಲಸಕ್ಕೆ ಹೋಗುವುದಿಲ್ಲ ಅನ್ನೋ ನಿರ್ಧಾರ ನೀವೇ ನಿರ್ಧಾರ ತೆಗೆದುಕೊಂಡಿದ್ದೀರಿ. ನಿಮ್ಮ ಅನುಭವ, ವಿದ್ಯಾಭ್ಯಾಸಕ್ಕೆ ಬೆಂಗಳೂರು, ಹೈದರಾಬಾದ್‌ನಲ್ಲಿ ಉತ್ತಮ ಕೆಲಸ ಸಿಗಲಿದೆ. ಆದರೆ ನೀವು ಜೀವನಾಂಶ ಬೇಡಿಕೆ ಇಡುತ್ತೀದ್ದೀರಲ್ಲ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ನೀವು ಮದುವೆಯಾಗಿ 18 ತಿಂಗಳಲ್ಲಿ ನೀವು ಬಿಎಂಡಬ್ಲ್ಯು ಕಾರ್ ಕೂಡ ಬೇಕೆಂದು ಬಯಸುತ್ತಿದ್ದೀರಿ. ಪ್ರಾಕ್ಟಿಕಲ್ ಆಗಿ 18 ತಿಂಗಳ ಮದುವೆಗೆ 18 ಕೋಟಿ ರೂಪಾಯಿಯನ್ನು ಕೇಳುತ್ತಿದ್ದೀರಿ. ಪ್ರತಿ ತಿಂಗಳಿಗೆ 1 ಕೋಟಿ ರೂಪಾಯಿ ಕೇಳುತ್ತಿದ್ದೀರಿ ಎಂದು ಸಿಜೆಐ ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಮಹಿಳೆಯು, ಪತಿ ಭಾರೀ ಶ್ರೀಮಂತರು. ನಾನು ಮಾನಸಿಕ ಅಸ್ವಸ್ಥೆ ಎಂದು ಕಾರಣ ನೀಡಿ ಮದುವೆಯನ್ನು ರದ್ದುಪಡಿಸಬೇಕೆಂದು ಕೇಳಿದ್ದಾರೆ. ಇನ್ನೂ ಪತಿಯ ಪರ ಹಿರಿಯ ವಕೀಲೆ ಮಾಧವಿ ದಿವಾನ್ ವಾದ ಮಂಡಿಸಿದ್ದರು. ಆಕೆಯೂ ಉದ್ಯೋಗ ಮಾಡಬೇಕು. ಎಲ್ಲವನ್ನೂ ಹೀಗೆ ಡಿಮ್ಯಾಂಡ್ ಮಾಡುವುದು ಸರಿಯಲ್ಲ ಎಂದು ವಾದಿಸಿದ್ದರು.
ಇದೇ ಸಂದರ್ಭದಲ್ಲಿ ಮಹಿಳೆ ನಾನು ಮಾನಸಿಕ ಅಸ್ವಸ್ಥೆಯಂತೆ ಕಾಣುತ್ತೇನಾ ಎಂದು ಸಿಜೆಐ ಅವರನ್ನು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ನಿಮ್ಮ ಮಾಜಿ ಪತಿಯ ತಂದೆಯ ಆಸ್ತಿಯನ್ನು ನೀವು ಕೇಳುವಂತಿಲ್ಲ ಎಂದರು.
ಪ್ರಕರಣದಲ್ಲಿ ಮಹಿಳೆಯೇ ಖುದ್ದಾಗಿ ವಾದ ಮಂಡಿಸಿದ್ದರು. ತನ್ನ ಮಾಜಿ ಪತಿ ಸಿಟಿ ಬ್ಯಾಂಕ್ ಮ್ಯಾನೇಜರ್ ಆಗಿದ್ದಾರೆ. ಎರಡು ಬ್ಯುಸಿನೆಸ್‌ಗಳೂ ಇವೆ ಎಂದು ಮಹಿಳೆ ಹೇಳಿದ್ದರು. ನನಗೆ ಮಗು ಬೇಕು. ಆದರೇ, ಪತಿ ಮಗುವನ್ನು ನನ್ನ ವಶಕ್ಕೆ ನೀಡಿಲ್ಲ. ಪತಿಯೇ ನಾನು ಮಾನಸಿಕ ಅಸ್ವಸ್ಥೆ ಎಂದು ಡಿವೋರ್ಸ್ ಅರ್ಜಿ ಸಲ್ಲಿಸಿದ್ದರು. ನನ್ನ ಮಾಜಿ ಪತಿಯೇ ಈ ಮೊದಲು ನಾನು ಇದ್ದ ಉದ್ಯೋಗವನ್ನು ತೊರೆಯುವಂತೆ ಬಲವಂತ ಮಾಡಿದ್ದರು ಎಂದು ಮಹಿಳೆ ವಾದಿಸಿದ್ದರು.
ಆಗ ಸುಪ್ರೀಂಕೋರ್ಟ್ ಮಾಜಿ ಪತಿಯ ಟ್ಯಾಕ್ಸ್ ರಿಟರ್ನ್ಸ್ ಅನ್ನು ಪರಿಶೀಲಿಸಿತು. ಪತಿಯು ಉದ್ಯೋಗ ತೊರೆದ ಬಳಿಕ ಅವರ ಆದಾಯದಲ್ಲಿ ಇಳಿಕೆಯಾಗಿದೆ ಎಂದು ಪತಿ ಪರ ವಕೀಲೆ ಮಾಧವಿ ದಿವಾನ್, ಕೋರ್ಟ್ ಗಮನಕ್ಕೆ ತಂದರು. ಪತಿಯಿಂದ ಫ್ಲ್ಯಾಟ್ ಪಡೆದು ತೃಪ್ತಿಪಡಿ, ಒಳ್ಳೆಯ ಉದ್ಯೋಗವನ್ನು ಹುಡುಕಿಕೊಳ್ಳಿ ಅಥವಾ ಆ 4 ಕೋಟಿ ಪಡೆದು, ಪುಣೆ, ಬೆಂಗಳೂರು, ಹೈದರಾಬಾದ್‌ನಲ್ಲಿ ಕೆಲಸ ಹುಡುಕಿಕೊಳ್ಳಿ ಎಂದು ಸಿಜೆಐ ಮಹಿಳೆಗೆ ಸಲಹೆ ನೀಡಿದರು. ಸದ್ಯ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.
ಇದನ್ನು ಓದಿ : ಧರ್ಮಸ್ಥಳ ಪ್ರಕರಣದ ತನಿಖೆಗೆ ಉತ್ತರಕನ್ನಡ ಜಿಲ್ಲೆಯ ಸೇರಿ 20 ಖಡಕ್ ಅಧಿಕಾರಿಗಳು.