ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಚೆನ್ನೈ(Chennai) : ಪ್ರೇಯಸಿಯರಿಬ್ಬರು ಸೇರಿ ಮತ್ತೋರ್ವ ಪ್ರೇಯಸಿಯನ್ನು ಕೊಲೆಗೈದ ಪ್ರಕರಣ ಭೇದಿಸುವಲ್ಲಿ ತಮಿಳುನಾಡಿನ ಸೇಲಂ ಪೊಲೀಸರು(Tamilunadu selam police) ಯಶಸ್ವಿಯಾಗಿದ್ದಾರೆ.
35 ವರ್ಷದ ಲೋಗನಾಯಕಿ ಕೊಲೆಯಾದ ಮಹಿಳೆ. ಆಕೆಯ ಪ್ರಿಯಕರ ಇಂಜಿನಿಯರಿಂಗ್ ವಿದ್ಯಾರ್ಥಿ(Engineer Student) ಅಬ್ದುಲ್ ಅಝೀಝ್ (22) ಮತ್ತು ಆತನ ಇನ್ನಿಬ್ಬರು ಪ್ರೇಯಸಿಯರಾದ ಐಟಿ ಉದ್ಯೋಗಿ ತಾವಿಯಾ ಸುಲ್ತಾನ (22) ಮತ್ತು ನರ್ಸಿಂಗ್ ವಿದ್ಯಾರ್ಥಿನಿ(Nursing Student) ಮೋನಿಶಾ (21) ಎಂಬ ಪೊಲೀಸರು ಆರೆಸ್ಟ್ ಮಾಡಿದ್ದಾರೆ.
ತಾವಿಯಾ ಸುಲ್ತಾನ ಮತ್ತು ಮೋನಿಶಾಳನ್ನು ಬಲೆಗೆ ಹಾಕಿಕೊಳ್ಳುವ ಮುನ್ನ ಆರೋಪಿ ಅಬ್ದುಲ್ ಸೋಷಿಯಲ್ ಮೀಡಿಯಾ ಮೂಲಕ ಖಾಸಗಿ ಟ್ಯೂಷನ್ ಶಿಕ್ಷಕಿಯಾಗಿದ್ದ ಲೋಗನಾಯಕಿಯನ್ನು ಪರಿಚಯ ಮಾಡಿಕೊಂಡಿದ್ದ. ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದ. ಲೋಗನಾಯಕಿ ಕೂಡ ಅಬ್ದುಲ್ ನನ್ನ ಮದುವೆಯಾಗುವ ಉದ್ದೇಶದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಅಲ್ಲಿಯಾ ಎಂದು ತನ್ನ ಹೆಸರು ಬದಲಾಯಿಸಿಕೊಂಡಿದ್ದಳು. ಆದರೆ ಅಬ್ದುಲ್ ಮದುವೆಯಾಗಲು ತಯಾರಿರಲಿಲ್ಲ. ಅವನ ಉಳಿದಿಬ್ಬರು ಪ್ರೇಯಸಿಯರು(Lovers) ಕೂಡ ಅಬ್ದುಲ್ನಿಂದ ದೂರವಿರುವಂತೆ ಲೋಗನಾಯಕಿಗೆ ತಾಕೀತು ಮಾಡಿದ್ದರು.
ಲೋಗನಾಯಕಿ ಮಾ.1ರಂದು ತಾನಿದ್ದ ಲೇಡೀಸ್ ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದಳು. ಪೊಲೀಸರು ಆಕೆಯ ಕಾಲ್ ರೆಕಾರ್ಡ್ ಪರಿಶೀಲಿಸಿದಾಗ ಆಕೆ ಅಬ್ದುಲ್ ಜೊತೆ ಕಾಂಟಾಕ್ಟ್ ನಲ್ಲಿರೋದು ಗೊತ್ತಾಗಿದೆ. ಆಕೆ ಅಬ್ದುಲ್ನನ್ನು ಭೇಟಿಯಾಗುವ ಸಲುವಾಗಿ ಯೆರಾಕುಡ್ಗೆ ಹೋಗಿದ್ದಳು. ಇದಕ್ಕೂ ಮೊದಲು ಆಕೆ ತನ್ನನ್ನು ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕೈಗೆ ಗಾಯಮಾಡಿಕೊಂಡಿದ್ದಳು. ಹೀಗಾಗಿ ಆತ ಲೋಗನಾಯಕಿಯನ್ನು ಯೆರಾಕುಡ್ಗೆ ಬರಲು ಹೇಳಿದ್ದ. ಅಲ್ಲಿ ಅಬ್ದುಲ್ ಮತ್ತು ಅವನ ಪ್ರೇಯಸಿಯರು ಆಕೆಯನ್ನು ಭೇಟಿ ಮಾಡಿ ಮತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನೆಪಹೇಳಿ ಗುಡ್ಡಗಾಡು ಪ್ರದೇಶಕ್ಕೆ ಕರದುಕೊಂಡು ಹೋಗಿದ್ದರು.
ಗಾಯ ಶಮನಕ್ಕೆ ಇಂಜೆಕ್ಷನ್ ಕೊಡುತ್ತೇನೆ ಎಂದು ಹೇಳಿ ನರ್ಸಿಂಗ್ ವಿದ್ಯಾರ್ಥಿನಿ ಆಕೆಗೆ ವಿಷದ ಇಂಜೆಕ್ಷನ್ ಚುಚ್ಚಿದ್ದಾಳೆ. ಆಕೆ ಪ್ರಜ್ಞೆ ಕಳೆದುಕೊಂಡಾಗ ಮೂವರು ಸೇರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸುವ ಪ್ರಯತ್ನ ಮಾಡಿದ್ದರು. ಹೀಗಾಗಿ ಆಕೆಯನ್ನು ಸುಮಾರು ಮೂವತ್ತು ಅಡಿ ಆಳದ ಕಮರಿಗೆ ಎಸೆದಿದ್ದರು. ಅದರೆ ಕಾಲ್ ರೆಕಾರ್ಡ್ನಿಂದಾಗಿ ಅಬ್ದುಲ್ಲ ತನ್ನ ಪ್ರೇಯಸಿಯರ ಜೊತೆ ಸೇರಿ ಲೋಗನಾಯಕಿಯನ್ನು ಸಾಯಿಸಲು ಮೊದಲೇ ಸಂಚು ಮಾಡಿದ್ದ ವಿಷಯ ತಿಳಿದುಬಂದಿದೆ. ಅಬ್ದುಲ್ ನನ್ನ ನಂಬಿದ ಲೋಗನಾಯಕಿ ಪ್ರಾಣ ಕಳೆದುಕೊಂಡಿದ್ದಾಳೆ. ಪೊಲೀಸರ ತನಿಖೆ ಮುಂದುವರಿದಿದೆ.
ಇದನ್ನು ಓದಿ : ಹೊರ ಗುತ್ತಿಗೆ ನೌಕರರಿಗೆ ಬಜೆಟ್ ನಲ್ಲಿ ಅನ್ಯಾಯ. ಕಾರವಾರದಲ್ಲಿ ಪ್ರತಿಭಟನೆ.
ರಾಜ್ಯ ಬಜೆಟ್ ನಲ್ಲಿ ಕರಾವಳಿ ಜಿಲ್ಲೆಗೆ ಏನೇನು ?
ಜಿಲ್ಲಾಧಿಕಾರಿ ಆಗಬೇಕೆಂದ ವಿದ್ಯಾರ್ಥಿನಿಯನ್ನು ಕುರ್ಚಿಯಲ್ಲಿ ಕೂರಿಸಿದ ಜಿಲ್ಲಾಧಿಕಾರಿ