ಗದಗ : ಸರ್ಕಾರದ ಉಚಿತ ವಿದ್ಯುತ್ ಯೋಜನೆ ವಿರುದ್ಧ ನಗರದ ಗಂಗೀಮಡಿ ಬಡಾವಣೆಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಸ್ಕಾಂ ಇಲಾಖೆ ನೀಡಿದ ವಿದ್ಯುತ್ ಬಿಲ್ ನೋಡಿ ಬಡ ಕುಟುಂಬಗಳು ಕಂಗಾಲಾಗಿವೆ. ಗದಗ ನಗರದ ಗಂಗೀಮಡಿ ಬಡಾವಣೆಯ ಬಹುತೇಕ ಮನೆಗಳಿಗೆ ಈ ಬಾರಿ ದುಪ್ಪಟ್ಟು ಬಿಲ್ ಬಂದಿವೆ. ಒಬ್ಬೊಬ್ಬರಿಗೆ 400ರಿಂದ 600 ಬಿಲ್ ಬಂದಿರುವುದಕ್ಕೆ ಸ್ಥಳೀಯರು ಅಸಮಾಧಾನಗೊಂಡಿದ್ದಾರೆ.
ಉಚಿತ ಯೋಜನೆ ಜಾರಿಗೂ ಮೊದಲು 80ರಿಂದ 100 ರೂಪಾಯಿ ಬಿಲ್ ಬರುತಿತ್ತು ಎಂದು ಹೇಳುವ ನಾಗರಿಕರು, ಈಗ ಎರಡು, ಮೂರು ಪಟ್ಟು ಬಿಲ್ ಹೆಚ್ಚಿಗೆ ಬರುತ್ತಿರುವುದಕ್ಕೆ ಆಕ್ರೋಶಗೊಂಡಿದ್ದಾರೆ.
ಸರ್ಕಾರ ಗೃಹಜ್ಯೋತಿ ಯೋಜನೆಯಲ್ಲಿ 200 ಯುನಿಟ್ ಉಚಿತ ವಿದ್ಯುತ್ ನೀಡುತ್ತಿದೆ. ಆದರೆ ಬಿಲ್ ಹೆಚ್ಚು ಬಂದಿದ್ದು ಯೋಜನೆ ನೀಡಿದ್ದು ಕೇವಲ ಕಾಟಾಚಾರಕ್ಕೆ ಮತ್ತು ಕಣ್ಣೋರೆಸಲು ಮಾಡಿರೋದಕ್ಕೆ ಅಂತಾ ಇಲ್ಲಿನ ಜನ ಪ್ರಶ್ನಿಸಿದ್ದಾರೆ.