ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ(Sirsi): ಇತ್ತೀಚಿಗಷ್ಟೇ ರಾಜ್ಯದ ಆರಣ್ಯ ಪ್ರದೇಶದಲ್ಲಿ ಮೇಯಿಸುವಿಕೆಗೆ ಜಾನುವಾರುಗಳನ್ನು(Cattles) ನಿಷೇಧಿಸಿ ಹೇಳಿಕೆ ನೀಡಿ ಹಿಂದಕ್ಕೆ ಪಡೆದು, ಜಾನುವಾರುಗಳ ನಿಷೇಧ ರಾಜ್ಯಕ್ಕೆ ಅನ್ವಯಿಸುವುದಿಲ್ಲ. ಆದರೆ, ನೆರೆ ರಾಜ್ಯದ ಜಾನುವಾರುಗಳಿಗೆ ಕರ್ನಾಟಕದ ಆರಣ್ಯ(Karnataka Forest) ಪ್ರವೇಶಕ್ಕೆ ಸಂಪೂರ್ಣ ನಿಷೇಧ ಎಂದು ಆದೇಶಿಸಿದ ಆರಣ್ಯ ಸಚಿವರ ಹೇಳಿಕೆಯು ಕಾನೂನು ಮತ್ತು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ(Ravindra Naik) ಹೇಳಿದ್ದಾರೆ.

ಕರ್ನಾಟಕ ಆರಣ್ಯ ನಿಯಮದ ಅಡಿಯಲ್ಲಿ ಮೇಯಿಸುವಿಕೆಗೆ ರಾಜ್ಯಪಾಲರ ಆದೇಶ ಅನುಸಾರ ಹಾಗೂ ಹಣಕಾಸು ಇಲಾಖೆಯ(Finance Department) ಒಪ್ಪಿಗೆಯೊಂದಿಗೆ ಕರ್ನಾಟಕ ಸರ್ಕಾರವು 20ನೇ ಜುಲೈ 1991 ರಂದು ಹೊರ ರಾಜ್ಯದ ಪ್ರಾಣಿಗಳಗೆ ರಾಜ್ಯದಲ್ಲಿ ಮೇಯಿಸುವಿಕೆಗೆ ಅವಕಾಶ ನೀಡಿದ ಆದೇಶವಿದೆ  ಎಂದು  ಅವರು ಹೇಳಿದರು.

ಕರ್ನಾಟಕ ಸರ್ಕಾರದ ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರು(Eshwar Khandre) ಕಾನೂನಿಗೆ ವ್ಯತಿರಿಕ್ತವಾಗಿ ಆರಣ್ಯ ಸಚಿವರು ನೀಡುವ ಆದೇಶಗಳು, ಆರಣ್ಯವಾಸಿಗಳಿಗೆ ಮತ್ತು ರೈತರಲ್ಲಿ ಗೊಂದಲ ಉಂಟು ಮಾಡುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದರು.

ರಾಜ್ಯ ಸರ್ಕಾರವು ರಾಜ್ಯದ ಅರಣ್ಯಗಳಲ್ಲಿ ಮೇಯಿಸುವಿಕೆಯನ್ನು ಕ್ರಮ ಬದ್ದಗೊಳಿಸಿ ಮೀಸಲು ಮತ್ತು ಸಂರಕ್ಷಿತ ಅರಣ್ಯದಲ್ಲಿ ಮೇಯಿಸಲು ಪರಿಷ್ಕೃತ ದರಗಳನ್ನು ನಿಗದಿಗೊಳಿಸಿ ಮೇಯಿಸುವಿಕೆಗೆ ಅವಕಾಶ ಇದ್ದಾಗಲೂ ಸಹಿತ ಸರಕಾರ ಆದೇಶವನ್ನು ಉಲ್ಲಂಘಿಸಿ ನೀಡಿದ ಸಚಿವರ ಹೇಳಿಕೆಯ ಮೌಲ್ಯತೆ ಪರಿಶೀಲಿಸುವುದು ಅನಿವಾರ್ಯವಾಗಿದೆ ಎಂದಿದ್ದಾರೆ‌.

ಆನೆಗೆ 100, ಎಮ್ಮೆಗೆ 25 ರೂಪಾಯಿದರನಿಗದಿ:
ಸರ್ಕಾರದ 20 ಜುಲೈ 1991 ರ ಆದೇಶಗಳಲ್ಲಿ ಇತರ ರಾಜ್ಯಗಳ ಪ್ರಾಣಿಗಳನ್ನು ನಮ್ಮ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಮೇಯಿಸುವಿಕೆಗೆ ನಿರ್ದಿಷ್ಟ ದರ ನಿಗದಿಗೊಳಿಸಿದೆ, ಹೊರ ರಾಜ್ಯದ ಪ್ರತಿ ಆನೆಗೆ, ಪ್ರತಿ ದಿನಕ್ಕೆ 100 ರೂಪಾಯಿ, ಒಂಟೆಗೆ ದಿನಕ್ಕೆ 50 ರೂಪಾಯಿ, ಎಮ್ಮೆಗೆ ವರ್ಷಕ್ಕೆ 25 ರೂಪಾಯಿ, ಹಸು, ಕರು, ಕತ್ತೆ, ಹೋರಿ, ಮುಂತಾದ ಪ್ರಾಣಿಗಳಿಗೆ ಪ್ರತಿ ವರ್ಷ ಪ್ರತಿ ಪ್ರಾಣಿಗೆ ರೂಪಾಯಿ 15 ಹಾಗೂ ಟಗರು, ಕುರಿಗಳಿಗೆ ವರ್ಷಕ್ಕೆ ತಲಾ 10 ರೂಪಾಯಿ ಎಂದು ನಿಗದಿಗೊಳಿಸಿ ಪರವಾನಿಗೆ ಮೇರೆಗೆ ಇತರೆ ರಾಜ್ಯಗಳ ಪ್ರಾಣಿಗಳನ್ನು ಕರ್ನಾಟಕ ರಾಜ್ಯದಲ್ಲಿ ಮೇಯಿಸುವಿಕೆಗೆ ಮುಕ್ತಗೊಳಿಸಿ ರಾಜ್ಯ ಸರಕಾರ 34 ವರ್ಷಗಳ ಹಿಂದೆಯೇ ಆದೇಶ ಮಾಡಿರುವುದು ಗಮನಾರ್ಹ ಅಂಶ ಎಂದು ಅವರು ಹೇಳಿದರು.

ಕಾನೂನುಮಾಹಿತಿಯಿಲ್ಲದಅರಣ್ಯಸಚಿವರು :  ಅರಣ್ಯ ಕಾನೂನಿಗೆ ಸಂಬಂಧಪಟ್ಟಂತೆ ಆರಣ್ಯ ಸಚಿವರು ದಿನಕ್ಕೊಂದು ಹೇಳಿಕೆ ಮತ್ತು ಟಿಪ್ಪಣೆ ನೀಡುತ್ತಾ, ಅರಣ್ಯ ಕಾನೂನಿಗೆ ಮತ್ತು ಸರ್ಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡುವ ಮೂಲಕ ಸಾರ್ವಜನಿಕವಾಗಿ ಗೊಂದಲಕ್ಕೆ ಕಾರಣವಾಗಿದೆ. ಅರಣ್ಯ ಸಚಿವರಿಗೆ, ಆರಣ್ಯ ಕಾನೂನುಗಳ ಮಾಹಿತಿ ಬಗ್ಗೆ ಕುರಿತು ಸಾರ್ವಜನಿಕವಾಗಿ ವಿಶ್ಲೇಷಿಸಲಾಗುತ್ತಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

ಇದನ್ನು ಓದಿ : ಬಾರೀ ಮಳೆಯಿಂದ ತತ್ತರಿಸಿದ ಹೊನ್ನಾವರ, ಕುಮಟಾ. ಕಾರವಾರದಲ್ಲೂ ಅಲರ್ಟ್.

ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ. ಬಾರೀ ಮಳೆಗಾಳಿ.

ಬೇಲಿ ಹಾರಿ ಬಂದ ಹಾವೇರಿ, ದಾವಣಗೆರೆ ಜೂಜುಕೋರರು. ಶಿರಸಿಯಲ್ಲಿ ಲಕ್ಷಾಂತರ ರೂ. ಹಣದೊಂದಿಗೆ ಸಿಕ್ಕಿಬಿದ್ದರು.