ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi): ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮನೆ ಕೆಲಸದ ಮಹಿಳೆಯ ಮಾಡಿರುವ  ಲೈಂಗಿಕ ದೌರ್ಜನ್ಯ ಎಸಗಿದ  ಪ್ರಕರಣದಲ್ಲಿ   ಸರ್ಕಾರದ ಪರವಾಗಿ ಅಂಕೋಲಾದ  ವಕೀಲ ಅಶೋಕ ನಾಯ್ಕ ವಾದಿಸಿದ್ದಾರೆ.

ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರ ಪ್ರಕರಣದ ವಿಚಾರಣೆ ನಡೆದಿತ್ತು. ಅಂಕೋಲೆಯ ನಾಡವರ ಸಮುದಾಯ ಭವನ ಹತ್ತಿರದ ನಿವಾಸಿ ದಿವಂಗತ ನಾರಾಯಣ ಹಮ್ಮು ನಾಯ್ಕ ಮತ್ತು ಶಾಂತಿ ಬಾಯಿ ಇವರ ಪುತ್ರನಾದ ಅಶೋಕ ನಾಯ್ಕ ಅವರು ಅಂಕೋಲೆಯ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಬಿಎಸ್‍ಸಿ ಪದವಿ ವಿಧ್ಯಾಭ್ಯಾಸ ಮಾಡಿದವರು. ಶಿರಸಿ ವಕೀಲ ಸಂಘದ ಸದಸ್ಯನಾಗಿ ವಕೀಲ ವೃತ್ತಿ ಪ್ರಾರಂಭಿಸಿ ನಂತರ ದೀರ್ಘಕಾಲ ಪ್ರೊಸಿಕ್ಯುಷನ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಇತ್ತೀಚಿಗೆ ಪ್ರೊಸಿಕ್ಯುಷನ್ ಪರವಾಗಿ ಗಂಭೀರ ಮತ್ತು ತೀಕ್ಷ್ಣ
ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಿಶೇಷ ಪ್ರೊಸಿಕ್ಯುಟರ್ ಆಗಿ ಅಶೋಕ ನಾಯ್ಕ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯಾದ್ಯಂತ ಕುತೂಹಲಕಾರಿಯಾದ ಪ್ರಕರಣದಲ್ಲಿ, ಪ್ರಜ್ವಲ್ ರೇವಣ್ಣ ಅವರಿಗೆ ದೋಷಿಯೆಂದು ಪ್ರಕಟಿಸಿ ತೀರ್ಪು ನೀಡಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಸಂತೋಷ ಗಜಾನನ ಭಟ್,  ಪ್ರೊಸಿಕ್ಯುಷನ್ ಪರ ಅಶೋಕ ನಾಯ್ಕ ಅವರ ಜೊತೆಯಲ್ಲಿ ಬಿ,ಎನ್,ಜಗದೀಶ್ ಸಹಿತ ವಾದ ಮಂಡಿಸಿದರು.

ಇದನ್ನು ಓದಿ : ಮಿಂಚಿ ಮರೆಯಾದ ಕಾಮಿಡಿ ಕಿಲಾಡಿ ಕಲಾವಿದ.

  ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಶಾಕ್. ದೋಷಿ ಎಂದು ತೀರ್ಪು.