ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಜೋಯಿಡಾ(Joida) : ಹಾಡುಹಗಲೇ ಮನೆಯೊಳಗೆ ಕರಡಿ (Bear) ನುಗ್ಗಿ ರಂಪಾಟ ನಡೆಸಿದ ಘಟನೆ ಜೋಯಿಡಾದ ಪಟ್ಟೇಗಾಳಿಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಸಂತೋಷ ಸದಾನಂದ ಗಾವಡೆ ಎಂಬವವರು ಮನೆಯಲ್ಲಿ ಇಲ್ಲದಿದ್ದ ಸಮಯದಲ್ಲಿ ಕರಡಿ ಮನೆಗೆ ನುಗ್ಗಿದೆ. ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯ ಸ್ಥಿತಿ ನೋಡಿ ಕರಡಿ ಬಂದಿರುವುದು ಗೊತ್ತಾಗಿದೆ. ಮನೆ ಒಳಗೆ ಮಲವಿಸರ್ಜನೆ ಮಾಡಿದಲ್ಲದೇ ಮನೆಯ ಸಿಮೆಂಟ್ ಶೀಟನ್ನು ಪುಡಿಪುಡಿ ಮಾಡಿದೆ.
ಮನೆಯವರೆಲ್ಲರೂ ಹೊಲಕ್ಕೆ ಹೋಗಿದ್ದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. ಒಂದು ವೇಳೆ ಮನೆಯಲ್ಲಿದ್ದಾಗಲೇ ಕರಡಿ ದಾಳಿ ಮಾಡಿದರೇ ಪರಿಸ್ಥಿತಿ ಗಂಭೀರವಾಗುತಿತ್ತು ಎಂಬುದು ಸ್ಥಳೀಯರು ಆತಂಕ ಪಡಿಸಿದ್ದಾರೆ.
ಇದನ್ನು ಓದಿ : ಕೊರಗಜ್ಜನ ಪವಾಡ. ಮನೆ ಕೆಲಸದಾಕೆಯ ಪ್ರಾರ್ಥನೆಗೆ ಸಿಕ್ಕಿತು ಯಜಮಾನನ ಬಂಗಾರ