ಕಾರವಾರ(KARWAR) : ಕರಾವಳಿಯ ಕಾಳಿ ತೀರದಲ್ಲಿ ಅದೆಷ್ಟೋ ಜೀವಗಳು ಬಲಿಯಾಗಿವೆ. ಶಿವಾಜಿ ಮಹಾರಾಜರು(SHIVAJI MAHARAJ) ಸ್ಥಾಪಿಸಿದ ಸದಾಶಿವಗಡ ಗುಡ್ಡದ (SADSHIVGADA HILL) ಮೇಲಿನ ಶ್ರೀ ದುರ್ಗಾದೇವಿ(SHRI DURGADEVI), ಕೋಡಿಭಾಗದ ಶ್ರೀ ಖಾಪ್ರಿ (KHAPRI), ಕಾಳಿಕಾ(KALIKA), ಸಂತೋಷಿ ಮಾತಾ (SANTOSHI MATA) ದೇವರ ಮಹಿಮೆಯಿಂದ ಬಾರೀ ದುರಂತ (TRAGEDY)ದಿಂದ ಕಾರವಾರ ಬಚಾವ್ (SAFE) ಆಗಿದೆ.
ಕಾಳಿ ಸೇತುವೆಯಲ್ಲಿ ಆಗಸ್ಟ್ ಏಳರ ಕತ್ತಲಲ್ಲಿ ನಡೆದ ರೋಚಕ ಘಟನೆ(INCIDENT) ಯಾವ ಸಿನೆಮಾಕ್ಕಿಂತ ಕಡಿಮೆಯಿರಲಿಲ್ಲ. ಸೇತುವೆ ಕುಸಿದು (BRIDGE COLLAPSE) ಬಿದ್ದಾಗ ಅಲರ್ಟ್(ALERT) ಆದ ಕೋಡಿಭಾಗದ ನಿವಾಸಿಗಳು ಜೊತೆಗೆ ಅಧಿಕಾರಿಗಳ ಕರೆಗೆ ಸಿಬ್ಬಂದಿಗಳು ಸ್ಪಂದಿಸಿದ ರೀತಿ ಮಾತ್ರ ಸೇವಾ ಮನೋಭಾವ ಪ್ರದರ್ಶಿಸುತ್ತದೆ. ಸೇತುವೆ ಬಿದ್ದಾಗ ಸುತ್ತಲೂ ಕತ್ತಲು(DARK), ಎಲ್ಲಿಯಾದರೂ ಮರ (TREE) ಬಿದ್ದಿರಬೇಕು, ಕಟ್ಟಡ(BUILDING) ಕುಸಿದಿರಬಹುದು ಅಂದುಕೊಂಡ ಸ್ಥಳೀಯರ ಅಂದಾಜು(GUESS) ಉಲ್ಟಾ ಆಗಿತ್ತು.
ಕಾಳಿ ನದಿಯ ಸಂಗಮದಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರರು(FISHERMANS) ಬಲೆ (NET) ಬಿಟ್ಟು ತೀರಕ್ಕೆ ಓಡಿ ಬಂದಿದ್ದರು. ಅದರಲ್ಲಿ ಸೂರಜ್ ಸಾರಂಗ ಮತ್ತು ಕರಣ್ ನಾವಗೆ ಸೇರಿದಂತೆ ಇತರರು ತೀರದಲ್ಲಿ ಇದ್ದಾಗ ಅಲ್ಲಿ ಸ್ಥಳಕ್ಕೆ ಬಂದವರು ಕರಾವಳಿ ಕಾವಲು ಪಡೆಯ(COASTAL SECURITY POLICE) ಬೋಟ್ ಕ್ಯಾಪ್ಟನ್ ಗಳಾದ ಅಶೋಕ್ ದುರ್ಗೆಕರ್ ಮತ್ತು ಸುದರ್ಶನ್ ತಾಂಡೇಲ್ ಅವರು. ಇನ್ಸಪೆಕ್ಟರ್ ನಿಶ್ಚಲ್ ಕುಮಾರ ಅವರ ಕರೆಗೆ ಓಡಿ ಬಂದಾಗ ಇನ್ನೊರ್ವ ಸಿಬ್ಬಂದಿ ವಿಜಯ ಸಾಳಗಾಂವ್ಕರ್ ಜೊತೆಯಾದರು.
ಸೇತುವೆ ಕುಸಿದಿದ್ದು ಗೊತ್ತಾಗಿದ್ದು ಆಗಲೇ ನೋಡಿ. ಸುತ್ತಲೂ ಕತ್ತಲು ದೋಣಿಯ(BOAT) ಮೂಲಕ ಸ್ಥಳಕ್ಕೆ ಹೋಗಿ ಚಾಲಕನನ್ನ ರಕ್ಷಿಸುವುದು ಸಹ ಕಷ್ಟವಾಗಿತ್ತು. ಎಲ್ಲಿಯಾದರೂ ದೋಣಿಯ ಫ್ಯಾನ್(FAN) ಸೇತುವೆಯ ಪೈಪ್(PIPE), ರಾಡಿಗೆ (RAD) ಸಿಕ್ಕಿ ಅನಾಹುತವಾಗಬಹುದು ಎಂಬ ಭಯವಿತ್ತು. ಆದರೂ ಅಶೋಕ್, ಸುದರ್ಶನ್, ವಿಜಯ್, ಸೂರಜ್ ಮತ್ತು ಕರಣ್ ಎರಡು ದೋಣಿಯ ಮೂಲಕ ಧೈರ್ಯ ಮಾಡಿ ಸ್ಥಳಕ್ಕೆ ಧಾವಿಸಿದರು.
ಅಷ್ಟರಲ್ಲಿ ಸೇತುವೆಯ ಕೆಳಕ್ಕೆ ಬಿದ್ದಿದ್ದ ಚಾಲಕ(DRIVER) ತನ್ನ ಲಾರಿಯ ಮುಂಬದಿಯ ಗ್ಲಾಸ್(LORRY FRONT GLASS) ಒಡೆದಿದ್ದರಿಂದ ಕ್ಯಾಬಿನ್ (CABIN) ಮೇಲಕ್ಕೆ ಬಂದಿದ್ದ. ತೀವ್ರ ಗಾಯಗೊಂಡು ರಕ್ಷಿಸಿ ಎಂದು ಕೂಗುತ್ತಿದ್ದ. ಅಂತೂ ಬ್ಯಾಟರಿ ಬೆಳಕಿನಲ್ಲಿ ಅಂತೂ ಬಾಲ ಮುರುಗನ್ ನನ್ನ ರಕ್ಷಿಸಿ(RESCUE) ತಮ್ಮ ದೋಣಿಯ ಮೂಲಕ ತೀರಕ್ಕೆ ತರಲಾಯಿತು. ತಕ್ಷಣ ತುರ್ತು ಚಿಕಿತ್ಸೆ ವಾಹನದಲ್ಲಿ ಆಸ್ಪತ್ರೆಗೆ ಕೊಂಡೋಯ್ಯಲಾಯಿತು. ಸದ್ಯ ಚಾಲಕ ಆಘಾತದಿಂದ ಹೊರ ಬಂದಿದ್ದಾನೆ.
ನಿಜಕ್ಕೂ ಕೂಡ ತುರ್ತು(EMERGENCY) ಪರಿಸ್ಥಿತಿಯಲ್ಲಿ ಧೈರ್ಯ ಮಾಡಿ ರಕ್ಷಣೆಗೆ ಮುಂದಾದ ಕಾಳಿ(KALI) ತೀರದ ಈ ಹೀರೋಗಳನ್ನ ನಾವು ನೆನೆಯಲೇಬೇಕು. ಇಂಥವರಿಗೆ ಸೂಕ್ತ ವೇದಿಕೆಯಲ್ಲಿ ಗೌರವಿಸುವ ಮೂಲಕ ಇವರ ಹಾಗೇ ಇರುವ ಅನೇಕ ಯುವಕರನ್ನ ಪ್ರೇರೆಪಿಸಬಹುದಾಗಿದೆ.
ಏನೇ ಇರಲಿ, ಕಾರವಾರದ ಕಾಳಿ ನದಿ ತೀರದಲ್ಲಿರುವ ಶ್ರೀ ದುರ್ಗಾದೇವಿ, ಶ್ರೀ ಖಾಪ್ರಿ ದೇವರು(GODS), ಕಾಳಿಕಾ(KALIKA), ಸಂತೋಷಿ ಮಾತಾ (SANTOSHI MATA) ದೇವರು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ದೇವರು ಇದ್ದಾನೆಂಬುದಕ್ಕೆ ಈ ಘಟನೆ(INCIDENT) ಸಾಕ್ಷಿಯಾಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.
ಇದನ್ನು ಓದಿ. ಸಿನೆಮಾದಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ