ಭಟ್ಕಳ (BHATKAL) : ಪ್ರವಾದಿ ಮಹ್ಮದ್ ಪೈಗಂಬರರನ್ನು(PRAVADI Mohammed PAIGAMBER) ಸ್ವಾಮೀ ನರಸಿಂಹಾನಂದ (SWAMI NARASIMHANANDA) ಅವರು ಅವಹೇಳನ ಮಾಡಿದಕ್ಕೆ ಆರೋಪಿಸಿ ಇಂದು ಅಕ್ಟೋಬರ್ 15ರಂದು ಮಜ್ಲಿಸೆ ಇಸ್ಲಾಹ-ವ-ತಂಝೀಮ್(MAJlSE ISLAHO TANZEEM) ಸಂಸ್ಥೆ ಭಟ್ಕಳ ಬಂದ್ ಗೆ ಕರೆ ನೀಡಿದೆ.
ನಿನ್ನೆ ಸಂಜೆ ಸಂಸ್ಥೆಯ(ORGANIZATION) ನೇತೃತ್ವದಲ್ಲಿ ಇಲ್ಲಿನ ಮಿನಿ ವಿಧಾನಸೌಧದ (MINI VIDHANASOUDHA) ಎದುರು ಬೃಹತ್ ಸಂಖ್ಯೆಯಲ್ಲಿ ನಾಗರಿಕರು ಸೇರಿ ಪ್ರತಿಭಟನೆ ನಡೆಸಿದ್ದರು. ಸಹಾಯಕ ಆಯುಕ್ತರ ಮೂಲಕ ಸರ್ವೋಚ್ಛ ನ್ಯಾಯಾಲಯದ(SUPREME COURT) ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದ್ದರು.
ಇವತ್ತು ಭಟ್ಕಳ ಬಂದ್(BHATKAL BUND) ಗೆ ಕರೆ ನೀಡಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು, ಶಾಲಾ ಕಾಲೇಜುಗಳನ್ನ ಬಂದ್ ಮಾಡುವಂತೆ ಕೋರಿದ್ದಾರೆ. ಹಿಂದೂಗಳು ಸಹ ತಾವೂ ನೀಡಿದ ಕರೆಗೆ ಬೆಂಬಲಿಸಬೇಕೆಂದು ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಕೋರಿಕೊಂಡಿದ್ದಾರೆ.
ಪ್ರವಾದಿ ಮಹ್ಮದ್ ಪೈಗಂಬರರ ವಿರುದ್ದ ಅವಹೇಳನಕಾರಿ ಭಾಷಣ ಯಾರೇ ಮಾಡಿದರೂ ಸಹಿಸಲು ಸಾಧ್ಯವಿಲ್ಲ. ಅವಹೇಳನಕಾರಿ ಭಾಷಣದಿಂದ ಮುಸ್ಲೀಮ ಸಮುದಾಯಕ್ಕೆ(Muslim community) ನೋವಾಗಿದೆ. ಪ್ರವಾದಿ ಮತ್ತು ಮುಸ್ಲಿಮರ ಬಗ್ಗೆ ಪದೇ ಪದೇ ಅವಹೇಳನಕಾರಿ ಹೇಳಿಕೆ ಕೇಳಿ ಬರುತ್ತಿದೆ. ಸಮಾಜದ ಶಾಂತಿ ಕದಡುವ ಇಂತಹವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ.
ಇದನ್ನು ಓದಿ : ಭಟ್ಕಳದಲ್ಲಿ ತಂಜಿಮ್ ಸಂಸ್ಥೆ ನೇತೃತ್ವದಲ್ಲಿ ಪ್ರತಿಭಟನೆ