ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬೈಂದೂರು(Bainduru):  ಮೀನು ಹಿಡಿಯಲು ತೆರಳುತ್ತಿದ್ದ  ದೋಣಿಯೊಂದು  ಮಗುಚಿ, ಅದೃಷ್ಟವಶಾತ್ ಮೀನುಗಾರರು ಪ್ರಾಣಾಪಾಯದಿಂದ(Fisherman Safe)  ಪಾರಾದ ಘಟನೆ .  ತಾಲೂಕಿನ ಉಪ್ಪುಂದದಲ್ಲಿ(Uppunda) ಸಂಭವಿಸಿದೆ.

ಘಟನೆಯಲ್ಲಿ ಒಟ್ಟು 9 ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾರದಾ ಎಂಬುವವರಿಗೆ ಸೇರಿದ ದೋಣಿಯಲ್ಲಿ 9 ಜನ ಮೀನುಗಾರರು ಭಾನುವಾರ  ಉಪ್ಪುಂದ ಗ್ರಾಮದ(Uppunda Village) ಮಡಿಕಲ್ ಸಮೀಪದ ಸಮುದ್ರಕ್ಕೆ ತೆರಳುತ್ತಿದ್ದರು. ಆ ಸಮಯದಲ್ಲಿ ಬೃಹತ್ ಅಲೆಗಳು ದೋಣಿಗೆ ಅಪ್ಪಳಿಸಿತು. ಕ್ಷಣಾರ್ಧದಲ್ಲಿ ದೋಣಿ ಮಗುಚಿ (Boat turnover) ಬಿದ್ದು ಮೀನುಗಾರರು ಸಮುದ್ರಕ್ಕೆ ಬಿದ್ದರು. ಮೀನುಗಾರರು ಲೈಫ್ ಜಾಕೆಟ್(Life Jacket) ಧರಿಸಿದ್ದರಿಂದ ಎಲ್ಲರು ಈಜಲು ಶುರುಮಾಡಿದರು.

ಈಜಿ ದಡ ಸೇರಿದ ಮೀನುಗಾರರು ಪ್ರಜ್ವಲ್ ಖಾರ್ವಿ, ಪ್ರಮೋದ್ ಖಾರ್ವಿ, ಗೌತಮ್ ಖಾರ್ವಿ, ಭಾಸ್ಕರ್‌ಖಾರ್ವಿ, ಯೋಗಿರಾಜ್ ಖಾರ್ವಿ, ಗೋವಿಂದ ಖಾರ್ವಿ, ಬಾಬು ಖಾರ್ವಿ, ದೀಪಕ್ ಖಾರ್ವಿ ಆಗಿದ್ದಾರೆ. ಸ್ಥಳೀಯರು ಬೇರೊಂದು  ದೋಣಿಯ ಮೂಲಕ ಹಗ್ಗ ಬಳಸಿ ಮಗುಚಿದ ದೋಣಿಯನ್ನು ದಡಕ್ಕೆ ತಂದರು.

ಘಟನೆಯಲ್ಲಿ ದೋಣಿಯ ಎಂಜಿನ್ ಹಾಗೂ ದೋಣಿಗೆ ಹಾನಿಯಾಗಿದ್ದು ದೋಣಿಯಲ್ಲಿದ್ದ ಬಲೆಗಳು ಸಮುದ್ರದಲ್ಲಿ ಕೊಚ್ಚಿ ಹೋಗಿದೆ. ಅಂದಾಜು  ಐದುವರೆ ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.

ಕೆಲ ದಿನಗಳ ಹಿಂದೆ ಭಟ್ಕಳದ ಅಳ್ವೆಕೋಡಿ ದೋಣಿ ದುರಂತದ(Alvekodi boat Tragedy) ಬಳಿಕ  ಲೈಫ್ ಜಾಕೆಟ್‌ ಧರಿಸುವಂತೆ ಸಂಬಂಧಪಟ್ಟ ಮೀನುಗಾರಿಕಾ ಇಲಾಖೆ(Fishries Department) ಸೂಚನೆ ನೀಡಿದ್ದರಿಂದ  ಉಪ್ಪುಂದದಲ್ಲಿ ಮೀನುಗಾರರ ಜೀವ ಉಳಿದಿದೆ.

ಇದನ್ನು ಓದಿ : ಹಾಡುಹಗಲೇ ಮನೆಗೆ ನುಗ್ಗಿದ ಕರಡಿ, ತಪ್ಪಿದ ಅನಾಹುತ

ಕೊರಗಜ್ಜನ ಪವಾಡ. ಮನೆ ಕೆಲಸದಾಕೆಯ ಪ್ರಾರ್ಥನೆಗೆ ಸಿಕ್ಕಿತು ಯಜಮಾನನ ಬಂಗಾರ

ಕಾರವಾರದ ನಂದನಗದ್ದಾದಲ್ಲಿ ಬಾರೀ ಅಗ್ನಿ ಅನಾಹುತ.  ಮನೆ ಸಂಪೂರ್ಣ ಭಸ್ಮ.