ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೊಯಿಡಾ(Joida) : ತಾಲೂಕಿನ ಕಾಳಿ ಹುಲಿ(Kali Tiger) ಸಂರಕ್ಷಿತ ಪ್ರದೇಶದ ಕುಂಬಾರವಾಡಾ ವನ್ಯ ಜೀವಿ(Kumbarawada Wildlife) ವಲಯದ ಡೇರಿಯಾ ಗ್ರಾಮದ ರೈತನ ಮೇಲೆ ಕರಡಿಗಳು ದಾಳಿ(Bears Attack) ನಡೆಸಿದ ಘಟನೆ ಸೋಮವಾರ ನಡೆದಿದೆ.
ಶಾಂತಾ ಹನುಮಂತ ಡೇರೆಕರ ಕರಡಿ ದಾಳಿಗೊಳಗಾದ ವ್ಯಕ್ತಿ. ಇಂದು ಸೋಮವಾರ ಬೆಳಗ್ಗೆ ಡೇರಿಯೇ ಗ್ರಾಮದ ಖುಂಬಯೆ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ದನ ಮೇಯಿಸುತಿದ್ದಾಗ ಆಕಸ್ಮಾತ್ ಮೂರು ಕರಡಿ ದಾಳಿ ಮಾಡಿದೆ. ಪರಿಣಾಮವಾಗಿ ಶಾಂತಾ ಅವರ ಮುಖ ಭಾಗ, ತಲೆ, ಬೆನ್ನು ಸೇರಿದಂತೆ ಅಂಗಾಂಗಗಳಿಗೆ ಭಾರಿ ಗಾಯವಾಗಿದೆ. ಗಾಯಗೊಂಡಾತ ಜೀವನ್ಮರಣದ ನಡುವೆ ಹೋರಾಡುತಿದ್ದಾನೆ.
ಕುಂಬಾರವಾಡಾ(Kumbarawada) ಮತ್ತು ಜೊಯಿಡಾ(Joida) ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ(Hubbali Kim’s Hospital) ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ರಾಜ್ಯದ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್. ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ.
ಕಾರವಾರದ ಯೋಧನಿಗೆ ತವರೂರಲ್ಲಿ ಅಂತಿಮ ವಿದಾಯ. ನೌಕಾಪಡೆಯಿಂದ ಗೌರವ.
ಅಂಗನವಾಡಿ, ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ – ಜಿಲ್ಲಾಧಿಕಾರಿ ಆದೇಶ