ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ದೇವಾಲಯದ ಹುಂಡಿ ಹಣ ಕಳ್ಳತನ(Hundi Theft ) ಮಾಡಿದ ಆರೋಪಿಗಳನ್ನ 12 ಗಂಟೆಯೊಳಗೆ ಬಂಧಿಸಲು ಯಶಸ್ವಿಯಾದ ಘಟನೆ ಭಟ್ಕಳದಲ್ಲಿ ನಡೆದಿದೆ.
ತಾಲೂಕಿನ ಶಿರಾಲಿ(Shirali) ಗುಡಿಹಿತ್ಲುನ ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದ ಹುಂಡಿ ಒಡೆದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಠಾಣೆ(Bhatkal Rural Station) ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾರಗದ್ದೆ ನಿವಾಸಿ ದರ್ಶನ ಮಂಜುನಾಥ ನಾಯ್ಕ ಮತ್ತು ಶಿರಾಲಿ ನಿವಾಸಿ ನಾರಾಯಣ ನಾಗಪ್ಪ ಗುಡಿಹಿತ್ಲ ಎಂದು ತಿಳಿದು ಬಂದಿದೆ. ಆಗಸ್ಟ್ 29ರ ಮಧ್ಯರಾತ್ರಿ ಭಟ್ಕಳ ತಾಲೂಕಿನ ಶಿರಾಲಿ ಗುಡಿಹಿತ್ಲು(Shirali Gudihitlu) ಗ್ರಾಮದ ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದ ಹುಂಡಿಯನ್ನು ಒಡೆದು, ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಬಳಿಕ ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ ಠಾಣೆಯಲ್ಲಿ(Bhatkal Rural Police Station) ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು 12 ಗಂಟೆಯೊಳಗಾಗಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತರಿಂದ ಕೃತ್ಯಕ್ಕೆ ಬಳಸಲಾದ ಒಂದು ಬೈಕ್ ಸೇರಿ ಒಟ್ಟು ರೂ.1,20,0,30 ಮೌಲ್ಯದ ಸ್ವತ್ತನ್ನು ವಶಕ್ಕೆ ವಶಕ್ಕೆ ಪಡೆದುಕೊಂಡಿದ್ದಾರೆ.
ಮೊದಲ ಆರೋಪಿ ದರ್ಶನ ಕಳೆದ ತಿಂಗಳಷ್ಟ ರೈಲ್ವೆ ನಿಲ್ದಾಣ ಸಮೀಪ ಮನೆಯಲ್ಲಿದ್ದ ಕಾರನ್ನು ಕಳವು ಮಾಡಿಕೊಂಡು ಹೋಗಿರುವ ಪ್ರಕರಣದಲ್ಲಿಯೂ ಕೂಡ ಆರೋಪಿಯಾಗಿದ್ದು. ಜೈಲಿನಿಂದ ಹೊರಬಂದ ಬಳಿಕ ಮತ್ತೆ ಕಳ್ಳತನಕ್ಕೆ ಇಳಿದಿದ್ದಾನೆ.
ಪ್ರಕರಣ ದಾಖಲಾದ 12 ಗಂಟೆಯೊಳಗೆ ಆರೋಪಿತರನ್ನು ಬಂಧಿಸಿದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಸಿ.ಪಿ.ಐ ಮಂಜುನಾಥ ಅರ್ಜುನ ಲಿಂಗಾರೆಡ್ಡಿ, ಪಿ.ಎಸ್.ಐ ರನ್ನಗೌಡ ಮತ್ತು ಠಾಣೆಯ ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ ಎಂ ಎನ್ ಅಭಿನಂಧಿಸಿದ್ದಾರೆ.
ಇದನ್ನು ಓದಿ : ಪತಿ ಕಿರುಕುಳದಿಂದ ಬೇಸತ್ತು ಪತ್ನಿ ಸಾವು. ಮುಂಡಳ್ಳಿಯಲ್ಲೊಂದು ಕರಾಳ ಘಟನೆ.
	
						
							
			
			
			
			
