ಕಾರವಾರ(KARWAR): ತಾಲೂಕಿನ ಹೊಸಾಳಿ ಕ್ರಾಸ್(HOSALI CROSS) ಬಳಿ ನಿಯಂತ್ರಣ ತಪ್ಪಿದ ಕಾರು(CAR) ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಕಾರವಾರ ನಗರದ ಬಾಡದ ರಾಹುಲ್ ಕಿಂದಳಕರ (38) ಮೃತಪಟ್ಟ ಚಾಲಕನಾಗಿದ್ದಾನೆ. ರಾಹುಲ್ ಕದ್ರಾ ಕಡೆಯಿಂದ ಸದಾಶಿವಗಡ ಕಡೆಗೆ ಕಾರು ಚಲಾಯಿಸಿಕೊಂಡು ಬರುತ್ತಿದ್ದ. ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಬೋರ್ಡ್ಗೆ ಗುದ್ದಿ ಪಲ್ಟಿಯಾಗಿದೆ. ಈ ವೇಳೆ ಕಾರು ಚಾಲಕ ಕಾರಿನಡಿ ಸಿಲುಕಿಕೊಂಡಿದ್ದು ಅಲ್ಲಯೇ ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ್ದಾನೆ. ಗೋವಾದ ಖಾಸಗಿ ಕಂಪನಿಯಲ್ಲಿ(GOA PRIVATE COMPANY) ಕೆಲಸ ಮಾಡಿಕೊಂಡಿದ್ದ ರಾಹುಲ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ(CHITTAKUL POLICE STATION) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಅನಿವಾಸಿ ಭಾರತೀಯ ಸದನ್ ದಾಸ್ ಕರ್ನಾಟಕ ಜಾನಪದ ಪರಿಷದ್ ಅಧ್ಯಕ್ಷ
ಅಮೇರಿಕ, ಜರ್ಮನಿಯಲ್ಲಿ ವೃತ್ತಿ ನಡೆಸಿದ ಇಂಜಿನಿಯರ್ ಈಗ ಅಸಹಾಯಕ