ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹುಬ್ಬಳ್ಳಿ(Hubli) : ರೀಲ್ಸ್ ಸ್ಟಾರ್ ಯುಟ್ಯೂಬರ್ ಮುಕಳೆಪ್ಪ(Youtuber Mukaleppa) ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ(Old Hubli Police Station) ಎಫ್‌ಐಆರ್ ದಾಖಲಾಗಿದೆ.
ಜೀವ ಬೆದರಿಕೆ ಮತ್ತು ಅಪಹರಣ ಮಾಡಿರುವ ಆರೋಪದ ಮೇಲೆ ಯೂಟ್ಯೂಬರ್(Youtuber) ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ(Mukaleppa) ವಿರುದ್ಧ ದೂರು ದಾಖಲಾಗಿದೆ. ಹಿಂದೂ ಯುವತಿ ಪ್ರೀತಿಸಿ ವಿವಾಹವಾಗಿರೋ ಕ್ವಾಜಾ ಶಿರಹಟ್ಟಿಯ(Qaja Shirahatti) ಮೇಲೆ ಯುವತಿ ತಾಯಿ ಶಿವಕ್ಕ ಜಾಲಿಹಾಳ ದೂರು ದಾಖಲಿಸಿದ್ದಾರೆ. ನಿನ್ನೆ ಹಿಂದೂಪರ ಸಂಘಟನೆಗಳ ಜೊತೆ ಠಾಣೆಗೆ ಆಗಮಿಸಿದ ಯುವತಿ ಹೆತ್ತವರು ಖ್ವಾಜಾ ಅಲಿಯಾಸ್ ಮುಕಳೆಪ್ಪ ಮೋಸ ಮಾಡಿ ತಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಈತನ ವಿರುದ್ಧ ಕ್ರಮ ಜರುಗಿಸುವುದಲ್ಲದೇ, ತಮ್ಮ ಮಗಳನ್ನು ವಾಪಸ್ ಕಳುಹಿಸಿಕೊಡಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ರೀಲ್ಸ್ ಮಾಡುವ ನೆಪದಲ್ಲಿ ಮುಕಳೆಪ್ಪ ಮದುವೆ ಸಮಾರಂಭವೆಂದು ವೇದಿಕೆ ಸಿದ್ಧಪಡಿಸಿದ್ದ. ನಾಲ್ಕು ತಿಂಗಳ ಹಿಂದೆ ನಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಆಗ ಅದು ರೀಲ್ಸ್ ಎಂದು ಮುಕಳೆಪ್ಪ ತಿಳಿಸಿದ್ದ. ಈಗ ರಿಯಲ್ ಆಗಿ ಮದುವೆಯಾಗಿದ್ದೇನೆ ಎಂದು ಹೇಳುತ್ತಿದ್ದಾನೆ. ಇದು ಸುಳ್ಳು ಮದುವೆ, ನಮ್ಮ ಮಗಳನ್ನು ವಾಪಸ್ ಕಳುಹಿಸಿಕೊಡಿ ಎಂದಿದ್ದಕ್ಕೆ ಫೋನ್ ಮಾಡಿ ಧಮಕಿ ಹಾಕುತ್ತಿದ್ದಾನೆ. ಕೂಡಲೇ ಈತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಯುವತಿ ತಂದೆ-ತಾಯಿ ದೂರಿನಲ್ಲಿ ಆಗ್ರಹಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಹಳೆ ಹುಬ್ಬಳ್ಳಿ ಠಾಣೆ(Old Hubli Station) ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : ಕಾರವಾರ ಸಮೀಪವೇ ಓಡಾಡುತ್ತಿದೆ ಚಿರತೆ. ಬಿಣಗಾ ನಾಗರಿಕರ ಆತಂಕ.
ಯುಟ್ಯೂಬರ್ ಮುಕಳೆಪ್ಪ ವಿರುದ್ದ ಭಜರಂಗ ದಳ ದೂರು. ಲವ್ ಜಿಹಾದ್ ಆರೋಪ.
ಶೀಲ ಶಂಕಿಸಿ ಪತ್ನಿ ಕೊಲೆ ಮಾಡಿದ ಪತಿ. ನಾಪತ್ತೆ ನಾಟಕವಾಡಿ ಚಿತ್ತಾಕುಲ ಪೊಲೀಸರ ಬಲೆಗೆ ಬಿದ್ದ ಆಸಾಮಿ.