ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೈದ್ರಾಬಾದ್(Hyderbad) : ಪುಷ್ಪ 2(Pushpa 2) ಸ್ಕ್ರೀನಿಂಗ್ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್(Tollywood) ಸ್ಟಾರ್ ನಟ ಅಲ್ಲು ಅರ್ಜುನ್(Actor Allu Arjun) ಆರೆಸ್ಟ್ ಮಾಡಲಾಗಿದೆ.
ಹೈದ್ರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ (Sandya Theater) ಪುಷ್ಪ 2 ಪ್ರದರ್ಶನದ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಇದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ. ಅಲ್ಲು ಅರ್ಜುನ್ ಸ್ಕ್ರೀನಿಂಗ್ ಗೆ ಬರುವ ಬಗ್ಗೆ ತೆಲಂಗಾಣ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಥಿಯೇಟರ್ ಮ್ಯಾನೇಜ್‌ಮೆಂಟ್‌ಗೆ ವಿಷಯ ತಿಳಿದಿತ್ತು. ಪೊಲೀಸರಿಗೆ ತಿಳಿದಿದ್ದರೆ ಹೆಚ್ಚಿನ ಭದ್ರತೆಯನ್ನು ನಿಯೋಜಿಸಬಹುದಿತ್ತು. ಇದಲ್ಲದೆ, ಪ್ರೇಕ್ಷಕರಿಗೆ ಪ್ರತ್ಯೇಕ ಪ್ರವೇಶ ಅಥವಾ ನಿರ್ಗಮನ ಇರಲಿಲ್ಲ. ಥಿಯೇಟರ್‌ಗೆ ಆಗಮಿಸಿದ ಅಪಾರ ಜನಸ್ತೋಮ ಹಾಗೂ ಭದ್ರತೆಯ ಕೊರತೆಯಿಂದಾಗಿ ನೂಕುನುಗ್ಗಲು ಉಂಟಾಗಿತ್ತು
ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್‌ನಲ್ಲಿ ನಟನನ್ನು ನೋಡಲು ಜಮಾಯಿಸಿದಾಗ ಘಟನೆ ಸಂಭವಿಸಿದೆ. ರೇವತಿ ಎಂದು 39 ವರ್ಷದ ಮಹಿಳೆ ಉಸಿರುಗಟ್ಟಿ ಪ್ರಾಣ ಕಳೆದುಕೊಂಡರೆ, ಅವರ ಎಂಟು ವರ್ಷದ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಕುಟುಂಬದಿಂದ ದೂರಿನ ಮೇರೆಗೆ ಪೊಲೀಸರು ಡಿಸೆಂಬರ್ 5 ರಂದು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೀಗ ನಟನ ಬಂಧನವಾಗಿದ್ದು ತನಿಖೆ ಮುಂದುವರಿದಿದೆ.
ಇದನ್ನು ಓದಿ : ಮಾಜಿ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಬಂಧನ.
ಡಿ 19 ರೊಳಗೆ ಸರ್ವೆ ಕಾರ್ಯ ನಿಲ್ಲಿಸದಿದ್ದರೆ ಯಾಂತ್ರೀಕೃತ ದೋಣಿಗಳ ಮೂಲಕ ಮುತ್ತಿಗೆ.