ಭಟ್ಕಳ(BHATKAL) : ಪಟ್ಟಣದಲ್ಲಿ ಓಡಾಡುವ ಆಟೋ ರಿಕ್ಷಾಗಳಿಗೆ ಅಳವಡಿಸಿದ ಪ್ಯಾಲೇಸ್ತಿನ್ ಧ್ವಜದ (PYAlESTEN FLAG) ಸ್ಟಿಕರ್ ತೆಗೆಸಿದ ಸಂಗತಿ ನಡೆದಿದೆ.
ಆಟೋಗಳಲ್ಲಿ ಅಳವಡಿಸಿರುವುದನ್ನ ಗಮನಿಸಿದ ನಾಗರಿಕರು ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸದಸ್ಯತಾ ಅಭಿಯಾನದ ಪ್ರಚಾರದ ಅಂಗವಾಗಿ ಭಟ್ಕಳಕ್ಕೆ ಭೇಟಿ ನೀಡಿದಾಗ ತಿಳಿಸಿದ್ದರು. ಇದಕ್ಕೆ ಖಂಡನೆ ವ್ಯಕ್ತಪಡಿಸಿದ ಸಂಸದರು ತಕ್ಷಣವೇ ಪೊಲೀಸ್ ಅಧಿಕಾರಿಗಳಿಗೆ ಪ್ಯಾಲೆಸ್ತೀನ್ ಬಾವುಟವಿರುವ ರಿಕ್ಷಾ ಗುರುತಿಸಿ ಬಾವುಟ ತೆರವುಗೊಳಿಸಲು ಸೂಚಿಸಿದರು.
ಹೀಗಾಗಿ ಕಾರ್ಯಪ್ರವೃತ್ತವಾದ ಪೊಲೀಸ್ ಇಲಾಖೆ ಕೂಡಲೇ ಆಟೋ ರಿಕ್ಷಾವನ್ನು ಗುರುತಿಸಿ ಪ್ಯಾಲೆಸ್ತೀನ್ ಬಾವುಟ ತೆರವುಗೊಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಈ ರಿಕ್ಷಾ ಪ್ಯಾಲೆಸ್ತೀನ್ ಬಾವುಟ ಹಚ್ಚಿಕೊಂಡು ತಿರುಗುತ್ತಿರುವುದನ್ನು ನೋಡಿ ಬಹಳಷ್ಟು ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು ಸಹ ಇಲಾಖೆಯ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ದಿಟ್ಟ ಕ್ರಮಕ್ಕೆ ಭಟ್ಕಳದ ಸಮಸ್ತ ದೇಶಪ್ರೇಮಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : HSRP ನಂಬರ್ ಪ್ಲೇಟ್ ನವೆಂಬರ್ 20ರವರೆಗೆ ಗಡುವು