ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) :ಕಳೆದ ಹಲವು ವರ್ಷಗಳಿಂದ ನಗರದ ಕೆಲ ಬೀದಿಬದಿಯಲ್ಲಿ ತರಕಾರಿ(Vegetables), ಪಲ್ಯದ ಸೊಪ್ಪು ಮಾರುತ್ತಿದ್ದ  ವ್ಯಾಪಾರಿಗಳನ್ನು ಕಾರವಾರ ನಗರಸಭೆ ತೆರವುಗೊಳಿಸಿರುವುದನ್ನ ಖಂಡಿಸಿ  ಬೀದಿಬದಿ ವ್ಯಾಪಾರಿಗಳು(Street Vendors) ನಗರಸಭೆಯ ಎದುರು  ಪ್ರತಿಭಟಿಸಿದರು.

ನಗರಸಭೆಯು ವ್ಯಾಪಾರಸ್ಥರಿಂದ ಶುಲ್ಕ ವಸೂಲಿ ಮಾಡುತ್ತಾರೆ. ಆದರೆ ಏಕಾಏಕಿಯಾಗಿ ವ್ಯಾಪಾರಿಗಳನ್ನ ಎಬ್ಬಿಸಿದ್ದಾರೆ.  ಎಲ್ಲಾ ವ್ಯಾಪಾರಿಗಳಿಗೆ  ಎಂ.ಜಿ ರಸ್ತೆಯ(M G Road) ಬದಿಯ ಪುಟ್ ಪಾತ್ ಮೇಲೆ ಕುಳಿತು ವ್ಯಾಪಾರ ಮಾಡುವಂತೆ ಸೂಚಿಸಿದ್ದಾರೆ. ಆದರೆ ನಗರಸಭೆ(CMC) ಸೂಚಿಸಿದ ಜಾಗದಲ್ಲಿ ವ್ಯಾಪಾರಕ್ಕೆ ಕುಳಿತರೆ ಯಾವ ಗ್ರಾಹಕರು ಬರುವುದಿಲ್ಲ. ತಮಗೆ ವ್ಯಾಪಾರ ಆಗದೇ ನಷ್ಟವಾದರೆ ಯಾರು ಹಣ ಕೊಡುತ್ತಾರೆ  ಎಂಬುದು ಪ್ರತಿಭಟನಾಕಾರರು ಅಳಲಾಗಿದೆ.

ಕಾರವಾರ ನಗರದಲ್ಲಿ(Karwar City) ಕಾರವಾರ ಮಾತ್ರವಲ್ಲದೇ ಅಂಕೋಲಾ(Ankola), ಗೋಕರ್ಣ(Gokarn)  ಭಾಗದ ತಾಜಾ ತರಕಾರಿ ಮತ್ತು ಪಲ್ಯದ ಸೊಪ್ಪು  ಬರುತ್ತದೆ. ಇದನ್ನ ಖರೀದಿಸಲು  ಮೀನು ಮಾರ್ಕೆಟ್, ಗಾಂಧಿ ಮಾರ್ಕೆಟ್, ಸವಿತಾ ವೃತ್ತ, ಶಿವಾಜಿ ವೃತ್ತದ ಬಳಿ ಗ್ರಾಹಕರು ಬರುತ್ತಾರೆ.  ಆದರೆ ನಗರಸಭೆಯು ಅಭಿವೃದ್ಧಿಯ ಹೆಸರಿನಲ್ಲಿ ಈ ರೀತಿ ಬಡ ವ್ಯಾಪಾರಿಗಳಿಗೆ ಬೀದಿ ಪಾಲು ಮಾಡುವುದು ಸರಿಯಲ್ಲ ಎಂದು ಮಹಿಳೆಯರು ಹೇಳುತ್ತಾರೆ.

ಬೀದಿಬದಿ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಫಕೀರಪ್ಪ ಭಂಡಾರಿ, ಜೀವನಾ ಪೋಕಳೆ, ಮಂಗಲಾ ವಡ್ಡರ, ಶಾರದಾ, ಸುವರ್ಣಾ, ಯಮುನಾ, ಗುಲಾಬಿ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು  ವ್ಯಾಪಾರಿಗಳು ತಮಗೆ ಮೊದಲಿನ ಹಾಗೆ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ವಿನಂತಿಸಿದ್ದಾರೆ.

ಇದನ್ನು ಓದಿ : GST ಜಾರಿ ಮಾಡಿದ್ದೂ ಮೋದಿ. ಹೆಚ್ಚೆಚ್ಚು ವಿಧಿಸಿದ್ದೂ ಅವರೇ. ಈಗ ಬೆನ್ನು ತಟ್ಟಿಕೊಳ್ತಾ ಇರೋದೂ ಮೋದಿಯವರೇ: ಸಿ.ಎಂ.ಸಿದ್ದರಾಮಯ್ಯ ವ್ಯಂಗ್ಯ

ಶರಾವತಿ ಉಳಿವಿಗಾಗಿ ಯುವ ಜನರ ಟ್ವೀಟರ್ ಅಭಿಯಾನಕ್ಕೆ ಪ್ಲ್ಯಾನ್.

ಮುಕಳೆಪ್ಪ ಲವ್ ಮ್ಯಾರೇಜ್ ಪ್ರಕರಣಕ್ಕೆ ಟ್ವಿಸ್ಟ್. ತಾಯಿಯ ವಿರುದ್ಧವೇ ಮಗಳ ಹೇಳಿಕೆ