ಭಟ್ಕಳ(BHATKAL) : ಅರಬ್ಬೀ ಸಮುದ್ರದ(OCEAN SEA) ನಡುವೆ ಇರುವ ನೇತ್ರಾಣಿ ನಡುಗಡ್ಡೆಯಲ್ಲಿ(NETRANI ISLAND) ಭಾರತೀಯ ನೌಕಾ ಪಡೆಯ(INDIAN NAVY) ಸಮರಭ್ಯಾಸ ನಡೆಯಲಿದೆ.

ಅಕ್ಟೋಬರ್ 14 ರಿಂದ 16 ರವರೆಗೆ ಬೆಳಿಗ್ಗೆ 07-00 ಗಂಟೆಯಿಂದ 18-00 ಗಂಟೆಯವರೆಗೆ ನೇತ್ರಾಣಿ ನಡುಗಡ್ಡೆಯಲ್ಲಿ ವಿಮಾನದಿಂದ ಪೈರಿಂಗ್(FIRING) ನಡೆಸುತ್ತಿರುವ ಹಿನ್ನಲೆಯಲ್ಲಿ ಮೀನುಗಾರಿಕಾ ಇಲಾಖೆ(FISHARIES DEPARTMENT) ಮೂಲಕ ಮೀನುಗಾರರರಿಗೆ ಎಚ್ಚರಿಕೆ (WARNING)ನೀಡಲಾಗಿದೆ.

ಭಾರತೀಯ ನೌಕಾ ಪಡೆ ವಿಮಾನದಿಂದ ಪೈರಿಂಗ್ ಹಮ್ಮಿಕೊಂಡಿದ್ದು, ಆ ಸಮಯದಲ್ಲಿ ನೇತ್ರಾಣಿ ನಡುಗಡ್ಡೆಯ 10 ನಾಟಿಕಲ್ ಮೈಲು ವ್ಯಾಪ್ತಿಯ ಪ್ರದೇಶದಲ್ಲಿ ಮೀನುಗಾರಿಕೆ ನಡೆಸದಂತೆ ಭಟ್ಕಳ ತಾಲೂಕಿನ ಪಾತಿ ದೋಣಿಯವರಿಗೆ, ಗಿಲ್ ನೆಟ್ ದೋಣಿಯವರಿಗೆ ಫಿಶಿಂಗ್ ಬೋಟ್, ಪರ್ಶಿಯನ್ ಬೋಟ್ ಸೇರಿದಂತೆ ಆಳ ಸಮುದ್ರ ಮೀನುಗಾರಿಕಾ ಬೋಟ್ ಗಳಿಗೆ ಸೂಚನೆ ನೀಡಲಾಗಿದೆ.

ಅಲ್ಲದೇ ಸ್ಕೂಬಾ ಡೈವಿಂಗ್(SCUBA DIVING) ಕಂಪನಿಯವರಿಗೆ ಹಾಗೂ ವಾಟರ್ ಸ್ಪೋರ್ಟ್ಸ್(WATER SPORTS) ನವರಿಗೆ ಮತ್ತು ಅದರ ಮಾಲೀಕರಿಗೆ ಸೂಕ್ತ ಎಚ್ಚರಿಕೆ ಮತ್ತು ತಿಳುವಳಿಕೆ ನೀಡುವಂತೆ ಅಧಿಕಾರಿಗಳ ಮೂಲಕ ಕೋರಲಾಗಿದೆ.

ಇದನ್ನು ಓದಿ : ಮುರ್ಡೇಶ್ವರದಲ್ಲಿ ಪ್ರವಾಸಿಗನ ಬಚಾವ್ ಮಾಡಿದ ಮೀನುಗಾರರು

ಅಳ್ವೆಕೋಡಿ ಮತ್ತು ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ವಿಜಯ ದಶಮಿ ಸಂಭ್ರಮ

ಉತ್ತರಕನ್ನಡ, ಉಡುಪಿ ಜನತೆಗೆ ಕೇಂದ್ರ ಸರ್ಕಾರ ಗಿಫ್ಟ್

ವಾಯುಭಾರ ಕುಸಿತದಿಂದ ಮುಂದಿನ ಕೆಲ ದಿನಗಳವರೆಗೆ ಮಳೆ

ಕರಾವಳಿಯಲ್ಲಿ ಬಾಂಗ್ಲಾ ದೇಶಿಯರು