ಕಅಂಕೋಲಾ : ತಾಲೂಕಿನ ಶಿರೂರು ಸಮೀಪ ಸಂಭಾವಿಸಿದ ದುರಂತ ಜಿಲ್ಲೆ, ರಾಜ್ಯದ ಜನರನ್ನ ಬೆಚ್ಚಿಬಿಳಿಸಿದೆ. ತುತ್ತು ಅನ್ನಕ್ಕಾಗಿ ಹೋರಾಟ ನಡೆಸುತ್ತಿರುವವರು ಜೀವ ಕಳೆದುಕೊಂಡಿದ್ದಾರೆ.
ಮಂಗಳವಾರ ಸಂಭವಿಸಿದ ಗುಡ್ಡ ಕುಸಿತ ಒಂದೇ ಕುಟುಂಬದ ಐವರನ್ನ ಸಮಾಧಿ ಪಡೆದುಕೊಂಡಿದೆ. ಗೋಕರ್ಣ ಠಾಣಾ ವ್ಯಾಪ್ತಿಯ ಗಂಗೆಕೊಳ್ಳ ಹಾಗೂ ದುಬ್ಬನಶಸಿಯ ಹತ್ತಿರ ಒಟ್ಟು ನಾಲ್ವರ ಮೃತ ದೇಹ ದೊರೆತಿದೆ.
ಶಾಂತಿ ಲಕ್ಷ್ಮಣ ನಾಯ್ಕ, 36 ವರ್ಷ, ಲಕ್ಷ್ಮಣ ಬೊಮ್ಮಯ್ಯ ನಾಯ್ಕ,42 ವರ್ಷ, ರೋಷನ್ ಲಕ್ಷ್ಮಣ ನಾಯ್ಕ,9 ವರ್ಷ ಹಾಗೂ ಇನ್ನೊರ್ವ ಗಂಡಸಿನ ಮೃತದೇಹ ದೊರೆತಿದೆ.
ಇನ್ನೂ ಅಂಗಡಿಯ ಸಮೀಪ, ಹೆದ್ದಾರಿ ಬದಿಯಲ್ಲಿ ನಿಂತಿದ್ದ ಎಷ್ಟು ಜನ ನಾಪತ್ತೆಯಾಗಿದ್ದಾರೆ ಎಂಬುದು ತಿಳಿದುಬಂದಿಲ್ಲ.