ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ಮಂಗಳವಾರ ಬೆಳಿಗ್ಗೆ ನಗರದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಹೂವು ಮತ್ತು ಹಣ್ಣಿನ ಅಂಗಡಿಗಳನ್ನ ನಗರಸಭೆ(CMC) ತೆರವುಗೊಳಿಸಲು ಮುಂದಾದಾಗ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ನಗರಸಭೆಯವರು ರಸ್ತೆ ಬದಿಯಲ್ಲಿ ಅಂಗಡಿ ಇಟ್ಡುಕೊಳ್ಳದಂತೆ ಸೂಚಿಸಿದಾಗ ವ್ಯಾಪಾರಿಗಳು ಕೆಂಡ ಮಂಡಲರಾದರು. ನಿನ್ನೆಯಷ್ಟೆ ನಗರದ ವಿವಿಧೆಡೆ ವ್ಯಾಪಾರ ಮಾಡುವ ಮಹಿಳೆಯರು ನಗರಸಭೆ ಮುಂದೆ ಪ್ರತಿಭಟಿಸಿದ್ದರು. ಇಂದು ನಗರದ ಸಿದ್ದಿವಿನಾಯಕ ದೇವಾಲಯದ(Siddivinayak Temple) ಪಕ್ಕದ ರಸ್ತೆಯಲ್ಲಿ ವ್ಯಾಪಾರದ ವಿಚಾರದಲ್ಲಿ ಹೆಂಗಸರ ನಡುವೆ ಜಗಳ ನಡೆಯಿತು. ಪರಸ್ಪರ ಮಹಿಳೆಯರು ಹೊಡೆದಾಡಿಕೊಂಡರು.

ನಗರಸಭೆ(CMC) ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಹೂ ಹಣ್ಣು ಮಾರುವವವರು ತಮ್ಮ ತಳ್ಳುಗಾಡಿಗಳನ್ನ ರಸ್ತೆಯಲ್ಲಿ ‌ಇಟ್ಟು ಪ್ರತಿಭಟನೆ ನಡೆಸಿದರು. ಈ ವೇಳೆ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಚಾರ ಸುಗಮಗೊಳಿಸಲು‌ ಹರಸಾಹಸ ಪಡಬೇಕಾಯಿತು. ಕೂಡಲೇ ಗಾಡಿಗಳನ್ನ ತೆಗೆಯುವಂತೆ ಸಿಪಿಐ ರಮೇಶ ಹೂಗಾರ ವಾರ್ನಿಂಗ್ ನೀಡಿದರು. ಈ ವೇಳೆ ವ್ಯಾಪಾರಿ ಮಹಿಳೆಯರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಗಾಡಿಗಳನ್ನ ಸರಿಸಲು ವ್ಯಾಪಾರಿಗಳು (Vendors) ಹಿಂದೇಟು ಹಾಕಿದಾಗ ತಾವೇ ತಮ್ಮ ಸಿಬ್ಬಂದಿಗಳೊಂದಿಗೆ ತಳ್ಳು ಗಾಡಿ ತೆರವುಗೊಳಿಸಲು ಮುಂದಾದರು. ಬಳಿಕ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದಾಗ ರಸ್ತೆಯಿಂದ ಪ್ರತಿಭಟನಾಕಾರರು ಹಿಂದೆ ಸರಿದರು.

ಮಹಿಳಾ ವ್ಯಾಪಾರಿಗಳನ್ನ ಮುಂದಿಟ್ಟು ಆಟ:
ಕಳೆದ ಹಲವು ದಿನಗಳಿಂದ ಬೀದಿ ಬದಿಯಲ್ಲಿ ತಮ್ಮ ಜೀವನ ನಿರ್ವಹಣೆಗಾಗಿ ಮಹಿಳೆಯರು ಸಣ್ಣ ಪ್ರಮಾಣದ ಹೂ ಹಣ್ಣುಗಳನ್ನ ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಕಾರವಾರದ ಕೆಲ ದೊಡ್ಡ ತರಕಾರಿ ಮತ್ತು ಹೂ ಹಣ್ಣಿನ ವ್ಯಾಪಾರಸ್ಥರು‌ ಮಹಿಳೆಯರ ನಡುವೆ ಜಗಳದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.  ಈಗಾಗಲೇ ಕೆಲ ದಿನಗಳ ಹಿಂದೆ ನಡೆದ ಬೆಳವಣಿಗೆ ಸಾಕ್ಷಿಯಾಗಿದೆ. ನಗರದಲ್ಲಿ ಉಳ್ಳವರ ಒಂದೊಂದು ಕುಟುಂಬದ ನಾಲ್ಕೈದು ಹೂ ಮತ್ತು‌ ಹಣ್ಣಿನ ಅಂಗಡಿಗಳು ಕಾರವಾರದ ಬೀದಿಗಳಲ್ಲಿ ಇವೆ. ವ್ಯಾಪಾರ ಮಾಡಲು ಆಕ್ಷೇಪವಿಲ್ಲ. ಆದರೆ ನಗರಸಭೆ ಅವುಗಳನ್ನ ಪರಿಶೀಲಿಸದೆ ಅನುಮತಿ ನೀಡುತ್ತಿರೋದ್ಯಾಕೆ ಎಂಬ ಪ್ರಶ್ನೆ ಕಾರವಾರ ನಗರದ ಜನತೆಯನ್ನ ಕಾಡುತ್ತಿದೆ. ರಸ್ತೆ ಬದಿಯಲ್ಲಿ  ಪುಟ್ ಪಾತ್ ಅತಿಕ್ರಮಿಸಿ, ದೊಡ್ಡ ದೊಡ್ಡ ಕೊಡೆಗಳನ್ನ ಅಳವಡಿಸಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದು ಎಲ್ಲರೂ ನೋಡುತ್ತಿದ್ದಾರೆ.

ಕಾರವಾರ ನಗರಸಭೆ ಇಂದೋರ್ ಪ್ರವಾಸದ (CMC Indore Tour) ಬಳಿಕ ನಗರದ ಸಂಚಾರ, ಸ್ವಚ್ಚತೆ ಕಡೆ ಗಮನ ಹರಿಸಿದೆ. ಇದು ಎಷ್ಟು ದಿನ ಅಂತ ಬೀದಿಬದಿ ವ್ಯಾಪಾರಸ್ಥರು ಮತ್ತು ಕಾರವಾರ ನಾಗರಿಕರು ನೋಡಲಿದ್ದಾರೆ.

ಇದನ್ನು ಓದಿ : ಮುರ್ಡೇಶ್ವರ ಪ್ರವಾಸಕ್ಕೆ ಬಂದು ಸಮುದ್ರದ ಅಲೆಗೆ ಸಿಲುಕಿದ ಕುಟುಂಬ. ಬಾಲಕ ನೀರುಪಾಲು.

ಬೀದಿ ಬದಿ ತರಕಾರಿ, ಸೊಪ್ಪು ಮಾರುವ ವ್ಯಾಪಾರಿಗಳನ್ನ ಒಕ್ಕಲೆಬ್ಬಿಸಿದ ನಗರಸಭೆ ವಿರುದ್ದ ಪ್ರತಿಭಟನೆ.

GST ಜಾರಿ ಮಾಡಿದ್ದೂ ಮೋದಿ. ಹೆಚ್ಚೆಚ್ಚು ವಿಧಿಸಿದ್ದೂ ಅವರೇ. ಈಗ ಬೆನ್ನು ತಟ್ಟಿಕೊಳ್ತಾ ಇರೋದೂ ಮೋದಿಯವರೇ: ಸಿ.ಎಂ.ಸಿದ್ದರಾಮಯ್ಯ ವ್ಯಂಗ್ಯ

ಶರಾವತಿ ಉಳಿವಿಗಾಗಿ ಯುವ ಜನರ ಟ್ವೀಟರ್ ಅಭಿಯಾನಕ್ಕೆ ಪ್ಲ್ಯಾನ್.