ಕಾರವಾರ: ಕಾರವಾರ ಮತ್ತು ಅಂಕೋಲಾ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಒಣಗಿರುವ ಮರಗಳು ಬುಡ ಸಮೇತ ಬೀಳುವ ಸಂಭವವಿದೆ. ಮರಗಳ ಹಸಿ ರೆಂಬೆಗಳು ಸಹ ಗಾಳಿಯಿಂದ ಆಕಸ್ಮಿಕ ಮುರಿದು ಬೀಳುವುದರಿಂದ ಸಾರ್ವಜನಿಕರಿಗೆ ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗುತ್ತಿರುವ ಸಾಧ್ಯತೆ ಇದೆ.
ಹೀಗಾಗಿ ಕಾರವಾರ ಅರಣ್ಯ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ. ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಬರುವ ರಸ್ತೆ ಬದಿ, ಸರ್ಕಾರಿ ಜಾಗಗಳಲ್ಲಿ ಒಣಗಿರುವ ಅಪಾಯ ಸ್ಥಿತಿಯ ಮರಗಳು ಹಾಗೂ ಒಣಗಿರುವ ರೆಂಬೆ ಕೊಂಬೆಗಳನ್ನು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಆಂತಕಕಾರಿ ಮರಗಳನ್ನು ತೆರವುಗೊಳಿಸಲು ಇಲಾಖೆಯಿಂದ ಪರವಾನಿಗೆ ನೀಡಲಾಗುತ್ತದೆ.
ಆದರಿಂದ ಕಾರವಾರ ವಿಭಾಗದ ವ್ಯಾಪ್ತಿಯ ನಗರ/ ಗ್ರಾಮೀಣ ಭಾಗದ ಸಾರ್ವಜನಿಕರು ಒಣಗಿರುವ, ಅಪಾಯ ಸ್ಥಿತಿಯ ಮರಗಳು/ ರೆಂಬೆಗಳು ಕಂಡುಬಂದಲ್ಲಿ ಕಾರವಾರ ವಲಯ ಅರಣ್ಯಾಧಿಕಾರಿ ದೂ ಸಂ: 08382-220440, ಮೊಬೈಲ್ ಸಂಖ್ಯೆ 9481993013, ದೂರವಾಣಿ ಸಂಖ್ಯೆ : 08382-288048, ಮೊಬೈಲ್ ಸಂಖ್ಯೆ 9481993010, ಕದ್ರಾ ವಲಯ ಅರಣ್ಯಾಧಿಕಾರಿ ದೂ.ಸಂ: 08382-254923, ಮೊ. ಸಂ: 9481993011, ಅಂಕೋಲಾ ವಲಯ ಅರಣ್ಯಾಧಿಕಾರಿ ದೂ.ಸಂ: 08388-230342, .: 9481993005, ದೂರವಾಣಿ ಸಂಖ್ಯೆ : 08388-276755, ಮೊಬೈಲ್ ಸಂಖ್ಯೆ : 9481993007, ರಾಮನಗುಳಿ ವಲಯ ಅರಣ್ಯಾಧಿಕಾರಿ ಮೊ.ಸಂ: 9481993008, ಹೊಸಕಂಬಿ ವಲಯ ಅರಣ್ಯಾಧಿಕಾರಿ ಮೊ.ಸಂ: 8277561198, 9481993006 ಗೆ ಮರಗಳ ಕಟಾವಣೆಗೆ ದೂರವಾಣಿ ಮೂಲಕ (ವಾಟ್ಸಪ್ ಪೋಟೋ ಮನವಿ ಲಗತ್ತಿಸಿ) ಮಾಹಿತಿ ನೀಡಬಹುದಾಗಿದೆ ಎಂದು ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.