ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಉತ್ತರಕನ್ನಡ ಜಿಲ್ಲೆಯ ಅಂಕೋಲಾ(Ankola) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52 (NH 52) ರ ಅವ್ಯವಸ್ಥೆ ಖಂಡಿಸಿ ಶುಕ್ರವಾರ ಜಿಲ್ಲಾ ಲಾರಿ ಚಾಲಕರ ಸಂಘದ ನೇತೃತ್ವದಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಯಿತು
ಅಂಕೋಲಾದಿಂದ ಯಲ್ಲಾಪುರವನ್ನ(Ankola to Yallapur) ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕಳೆದ ಕೆಲ ತಿಂಗಳಿಂದ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway) ಸಾಕಷ್ಟು ಪ್ರಮಾಣ ಹೊಂಡಗುಂಡಿಗಳು ಬಿದ್ದಿವೆ. ಹೀಗಾಗಿ ವಾಹನ ಸವಾರರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ನಿತ್ಯವೂ ಅಪಘಾತಗಳು ಸಂಭವಿಸಿ ಜನರ ಸಾವು ನೋವು ಸಂಭವಿಸುತ್ತಿದ್ದರು ಯಾರು ಲಕ್ಷ್ಯ ಹಾಕುತ್ತಿಲ್ಲ. ಹೀಗಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ದ ಹಿಡಿಶಾಪ ಹಾಕುತ್ತಾ ವಾಹನ ಸವಾರರು ಸಂಚರಿಸುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯತನಕ್ಕೆ ಹೆದ್ದಾರಿಯಲ್ಲಿ ಏಡಿಗಳನ್ನ(Crabs) ಬಿಟ್ಟು ಪ್ರತಿಭಟಿಸಲಾಯಿತು
ದೂರದ ಹುಬ್ಬಳ್ಳಿ, ಕಾರವಾರ, ಮಣಿಪಾಲ, ಮಂಗಳೂರು ಕಡೆ ಬರುವ ರೋಗಿಗಳು ತೀವೃ ತೊಂದರೆಪಡುತ್ತಿದ್ದು ಜನರು ಪಡುತ್ತಿರುವ ಕಷ್ಟಗಳನ್ನ ಬಿಂಬಿಸುವ ಅಣಕು ಪ್ರದರ್ಶನವೊಂದನ್ನ(Mock Show) ಮಾಡಿ ಅಂಬುಲೆನ್ಸ್ ಮೂಲಕ ಮಹಿಳೆಯೊಬ್ಬಳ ಹೆರಿಗೆ ಮಾಡಿಸಲಾಯಿತು. ಆ ಮೂಲಕವಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದರು.
ವಾಹನ ಚಾಲಕರು ಪಾಡಿನ ಬಗ್ಗೆ ಕಲಾವಿದರು ಬೀದಿನಾಟಕ ಮತ್ತು ಹಾಡುಗಳ ಮೂಲಕ ಕಲಾವಿದರಿಂದ ಪ್ರಸುತಪಡಿಸಲಾಯಿತು. ಬೃಹತ್ ಯೋಜನೆಗಳನ್ನ ತರುವ ಸರ್ಕಾರ ರಸ್ತೆ ಅಭಿವೃದ್ದಿ ಕಡೆಗೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ಪ್ರತಿಭಟನಾಕಾರರು ಅಸಮಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಾಧವ ನಾಯಕ, ಗಣಪತಿ ಮೂಲಿಮನೆ, ವಿಜಯಕುಮಾರ ನಾಯ್ಕ, ಅಲಗೇರಿಯ ಕಲಾವಿದರು, ಲಾರಿ ಸಂಘದ ಪ್ರತಿನಿಧಿಗಳು, ಟ್ಯಾಕ್ಸಿ ಸಂಘದ ಪ್ರತಿನಿಧಿಗಳು ಹಾಜರಿದ್ದರು. ಪ್ರತಿಭಟನೆ ಹಿನ್ನಲೆಯಲ್ಲಿ ಕಾರವಾರ ಮತ್ತು ಅಂಕೋಲಾದ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಇದನ್ನು ಓದಿ : ಸಪ್ಟೆಂಬರ್ 27ರಂದು ಕಾರವಾರದಲ್ಲಿ ಉಚಿತ ವಾಕ್ ಮತ್ತು ಶ್ರವಣ ಶಿಬಿರ.
ಶಾಸಕ ದಿನಕರ ಶೆಟ್ಟಿ ಅವರಿಗೆ 673 ಮತಗಳ ಅಂತರದಿಂದ ಗೆಲುವು.
ಯುಟ್ಯೂಬರ್ ಮುಕಳೆಪ್ಪ ವಿರುದ್ದ ಶ್ರೀರಾಮ ಸೇನೆ ಗುಡುಗು. ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ