ಕಾರವಾರ (KARWAR) : ಕಾರವಾರದಿಂದ ಕೈಗಾಕ್ಕೆ ತೆರಳುವ ಕಡವಾಡದ ಬಳಿ ಗುಡ್ಡ Kಕುಸಿಯುತ್ತಿದೆ. ಮಂದ್ರಾಳಿ ಭೂ ಕುಸಿತವಾಗಿದೆ(LANDSLIDE). ಹೀಗಾಗಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಕಳೆದ ದಶಕಗಳ ಹಿಂದೆ ಈ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಡವಾಡ ಗ್ರಾಮದಲ್ಲಿ (KADWAD VILLAGE) ಭೂ ಕುಸಿತವಾಗಿತ್ತು. ಜರಿವಾಡದಲ್ಲಿ ಉಂಟಾದ ಘಟನೆಯಿಂದ ಹಲವು ಜನರು ಸಾವನ್ನಪ್ಪಿದ್ದರು.
ಈಗ ಮಂದ್ರಾಳಿ ಸಮೀಪ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತವಾಗಿದೆ. ಮೊನ್ನೆಚ್ಚರಿಕೆಯಾಗಿ ರಸ್ತೆ ಮಾರ್ಗ ಬಂದ್ ಮಾಡಲಾಗಿದೆ. ಜುಲೈ 17ರ ವರೆಗೆ ಈ ಮಾರ್ಗದಲ್ಲಿ ಓಡಾಡುವವರು ಚಿತ್ತಾಕುಲ – ಅಸನೋಟಿ – ಕದ್ರಾ (KADRA) ಮಾರ್ಗದಲ್ಲಿ ಓಡಾಡುವಂತೆ ಜಿಲ್ಲಾಡಳಿತ ತಿಳಿಸಿದೆ.