ಕಾರವಾರ : ಭಟ್ಕಳ ತಾಲೂಕಿನಲ್ಲಿ ಉಂಟಾಗುವ ವಿದ್ಯುತ್ ಸಮಸ್ಯೆಯನ್ನ ನಿಭಾಯಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಸೂಚನೆ ನೀಡಿದರು.

ಕಾರವಾರದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಮಳೆಗಾಲದ ಸಂದರ್ಭದಲ್ಲಿ ಭಟ್ಕಳ ತಾಲೂಕಿನ ನಾಗರಿಕರು ವಿದ್ಯುತ್ ಕೈಕೊಡುತ್ತಿರುವ ಬಗ್ಗೆ ಪದೇಪದೇ ದೂರನ್ನ ಸಲ್ಲಿಸ್ತಾರೆ. ಜೋಗ ಮಾರ್ಗದ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗುವ ಹಿನ್ನೆಲೆಯಲ್ಲಿ ಏಳು ವರ್ಷದ ಹಿಂದೆ ನಾನೇ ಮೆಸ್ಕಾಂ ಜೊತೆ ಮಾತನಾಡಿ ಬೈಂದೂರು ಮಾರ್ಗದಿಂದ ವಿದ್ಯುತ್ ಪೂರೈಸಲು ಯೋಜನೆ ರೂಪಿಸಿದ್ದೇವು. 110ಕೆವಿ ಗ್ರಿಡ್ ಮಾಡಲು ಯೋಜನೆ ಮಾಡಿದ್ದೆವು, ಏನಾಯಿತು? ಎಂದು ಕೆಪಿಟಿಸಿಎಲ್ ಅಧಿಕಾರಿಗಳನ್ನ ಪ್ರಶ್ನಿಸಿದರು.

ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಸುನೀಲಕುಮಾರ ಮಾತನಾಡಿ ಅರಣ್ಯ ಸಮಸ್ಯೆ, ಕೋರ್ಟ್ನಲ್ಲಿ ತೊಂದರೆಯಾಗುವ ಬಗ್ಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆದಷ್ಟು ಬೇಗ 110 ಕೆವಿ ಗ್ರಿಡ್ ಮಾಡಿ ಬೈಂದೂರು ಮೂಲಕ ಭಟ್ಕಳಕ್ಕೆ ಪರ್ಯಾಯವಾಗಿ ವಿದ್ಯುತ್ ಪೂರೈಸುವ ವ್ಯವಸ್ಥೆ ಮಾಡಿ. ಜನತೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಹೇಳಿದರು.