ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕಾರವಾರ ಉಪ ವಿಭಾಗದ(Karwar Subdivision) ಪ್ರದೇಶಗಳಲ್ಲಿ ತುರ್ತು ಲೈನ್ ನಿರ್ವಹಣೆ ಕೆಲಸ ಇಟ್ಟುಕೊಂಡಿರುವುದರಿಂದ ಸೆ.27 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3.30 ಗಂಟೆಯವರೆಗೆ ಸದಾಶಿವಗಡ ಫೀಡರಿನ ಚಿತ್ತಾಕುಲ, ದೇವಭಾಗ, ಸೀಬರ್ಡ್ ಕಾಲೋನಿ, ದೇವವಾಡ, ಬೆತ್ತನಾಯ್ಕವಾಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಕಾರವಾರ ಉಪ-ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರ್ (ವಿ)ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊನ್ನಾವರದಲ್ಲೂ ವಿದ್ಯುತ್ ವ್ಯತ್ಯಯ: ಹೊನ್ನಾವರ ಉಪ-ವಿಭಾಗದ(Honnavar Subdivision) ಪಟ್ಟಣ ಶಾಖೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹೊಸ ವಿದ್ಯುತ್ ಮಾರ್ಗದ ನಿರ್ಮಾಣದ ನಿಮಿತ್ತ ಎಲ್.ಐ.ಸಿ. ಫೀಡರ್ ವ್ಯಾಪ್ತಿಯಲ್ಲಿ ಸೆ.27 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಹೊನ್ನಾವರ ಉಪ-ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರ್ (ವಿ)ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : ಹೆದ್ದಾರಿ ಅಭಿವೃದ್ಧಿ ಗಾಗಿ ವಿನೂತನ ಪ್ರತಿಭಟನೆ