ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಪುರಾಣ ಪ್ರಸಿದ್ದ ಗೋಕರ್ಣದ(Gokarn) ಪರ್ವತಗಳ ಗುಹೆಯಲ್ಲಿ ವೀಸಾ ಅವಧಿ ಮುಗಿದಿದ್ದರೂ ತನ್ನ ಇಬ್ಬರು ಮಕ್ಕಳೊಂದಿಗೆ ಅಕ್ರಮವಾಗಿ ವಾಸವಾಗಿದ್ದ  ರಷ್ಯಾದ ಮಹಿಳೆಯನ್ನ(Russai Women) ಇದೀಗ ಸುರಕ್ಷಿತವಾಗಿ ರಷ್ಯಾಕ್ಕೆ ಕಳಿಸಲಾಗಿದೆ.

ನೀನಾ ಕುಟಿನಾ (40) ಅವರನ್ನು ಗೋಕರ್ಣ ಪೊಲೀಸರು ಕೊನೆಗೂ ರಷ್ಯಾಕ್ಕೆ ವಾಪಸ್ ಕಳುಹಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಆಕೆಯ ಮಕ್ಕಳಾದ ಪ್ರಿಯಾ (6) ಮತ್ತು ಅಮಾ (4) ಅವರನ್ನು ಸಹ ಅವರೊಂದಿಗೆ ವಾಪಸ್ ಕಳುಹಿಸಲಾಗಿದೆ. ಮೂವರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ(Bangalore International Airport) ವಾಪಸ್ ಅವರ ದೇಶಕ್ಕೆ ಕಳಿಸಲಾಗಿದೆ.

ಕೆಲವು ತಿಂಗಳ ಹಿಂದೆ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ನೀನಾ ಕುಟಿನಾ ವೀಸಾ ಅವಧಿ ಮುಗಿದಿದ್ದರೂ, ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಗೋಕರ್ಣ ಪ್ರದೇಶದ ದಟ್ಟ ಕಾಡಿನಲ್ಲಿರುವ ಗುಹೆಯಲ್ಲಿ ವಾಸಿಸುತ್ತಿದ್ದರು. ರಷ್ಯಾದಲ್ಲಿ ವಾಸಿಸುವ ಪತಿ ಡೋಶ್ಲೋಮೊ ಗೋಲ್ಡ್‌ಸ್ಟೈನ್ ಅವರೊಂದಿಗಿನ ಕೆಲವು ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ ಅವರು ತಮ್ಮ ಮಕ್ಕಳೊಂದಿಗೆ ಭಾರತದಲ್ಲಿಯೇ ಇದ್ದರು. ಆದಾಗ್ಯೂ, ಪತಿ ಬೆಂಗಳೂರು ಹೈಕೋರ್ಟ್ ನಲ್ಲಿ ತನ್ನ ಪತ್ನಿ ಮತ್ತು ಮಗಳನ್ನು ಅವರ ತಾಯ್ನಾಡಿಗೆ ಕಳುಹಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ಪೀಠ ವಿಚಾರಣೆ ನಡೆಸಿತು. ನಂತರ, ಮಹಿಳೆ ಮತ್ತು ಮಕ್ಕಳನ್ನು ರಷ್ಯಾಕ್ಕೆ ಕಳುಹಿಸಲು ಆದೇಶಿಸಲಾಯಿತು. ಏತನ್ಮಧ್ಯೆ, ಗೋಕರ್ಣ ಪೊಲೀಸರು (Gokarn Police) ನೀನಾ ಮತ್ತು ಅವರ ಮಕ್ಕಳ ಡಿಎನ್ ಎ ಪರೀಕ್ಷೆ ನಡೆಸಿ, ಮಕ್ಕಳು ಅವರದ್ದೇ ಎಂದು ಸ್ಪಷ್ಟಪಡಿಸಿದರು. ಕೆಲವು ದಿನಗಳ ಹಿಂದೆ, ರಾಮತೀರ್ಥ(Ramateertha) ಕಾಡಿನಲ್ಲಿ ಗಸ್ತು ತಿರುಗುತ್ತಿದ್ದಾಗ, ಪೊಲೀಸರು ನೀನಾ ಮತ್ತು ಅವರ ಮಕ್ಕಳು ಗುಹೆಯಲ್ಲಿ ಅಡಗಿರುವುದನ್ನು ಗಮನಿಸಿ  ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದರು.

ನ್ಯಾಯಾಲಯದ ಆದೇಶದ ಪ್ರಕಾರ ಎಲ್ಲಾ ಸರ್ಕಾರಿ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ನೀನಾ ಕುಟಿನಾ ಮತ್ತು ಅವರ ಮಕ್ಕಳನ್ನು  ಸುರಕ್ಷಿತವಾಗಿ ರಷ್ಯಾ ಸೇರಿಕೊಂಡಿದ್ದಾರೆಂಬ ಮಾಹಿತಿ ಲಭಿಸಿದೆ.

ಇದನ್ನು ಓದಿ : ರೈಲಿಗೆ ಸಿಲುಕಿ ಆತ್ಮತ್ಯೆಗೆ ಶರಣಾದ ವ್ಯಕ್ತಿ. ದೂರು ದಾಖಲು.

ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಗೋವಾದಲ್ಲಿ ಮಾಡಿದ ಅಧಿಕಾರಿಗಳು.