ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬಳ್ಳಾರಿ : ಕೋತಿಯೊಂದು ಧ್ಯಾನದಲ್ಲಿ ಕುಳಿತಿದ್ದ ವಿದ್ಯಾರ್ಥಿ ಬಳಿ ಬಂದು ಕೀಟಲೆ ಮಾಡಿದ ಘಟನೆ ಬಳ್ಳಾರಿ(Ballari) ಜಿಲ್ಲೆಯ ಕಂಪ್ಲಿ (Kampli) ತಾಲೂಕಿನ ದೇವಲಾಪುರ ಗ್ರಾಮದಲ್ಲಿ ನಡೆದಿದೆ.
ಶಾಲಾ ಆವರಣದಲ್ಲಿ ಧ್ಯಾನ ಮಾಡುತ್ತಾ ಮಗ್ನನಾಗಿದ್ದ ವಿದ್ಯಾರ್ಥಿ(Students) ಪಕ್ಕದಲ್ಲೇ ಕೋತಿಯೊಂದು(Monkey) ಬಂದಿತು. ಕೋತಿ ನೋಡಿದ ಉಳಿದ ವಿದ್ಯಾರ್ಥಿಗಳು ಗಾಬರಿಯಾಗಿದ್ದರು. ಆದರೆ ಕುಳಿತಲ್ಲೇ ಕುಳಿತು ಕಣ್ಣು ಮುಚ್ಚಿ ಧ್ಯಾನ ಮಾಡಿದ ವಿದ್ಯಾರ್ಥಿ ಕೆಲ ಹೊತ್ತು ಗಾಬರಿಯಾಗಲಿಲ್ಲ.
ಕೋತಿಯು ವಿದ್ಯಾರ್ಥಿಯ ತಲೆಯ ಸವರಿ, ಮುತ್ತಿಟ್ಟರು(Kiss) ಜಪ್ಪೆನ್ನದೇ ಧೈರ್ಯವಾಗಿ ಕುಳಿತಿದ್ದ. ಉಳಿದ ವಿದ್ಯಾರ್ಥಿಗಳು ಕೋತಿಯ ಬಗ್ಗೆ ತಮಾಷೆ ಮಾಡಿದರೂ ತಾಳ್ಮೆಯಿಂದ ಇದ್ದ ವಿದ್ಯಾರ್ಥಿ ಬಗ್ಗೆ ಜನತೆ ಭೇಷ್ ಅಂದಿದ್ದಾರೆ.
ಇದನ್ನು ಓದಿ : ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಆರ್ ಎಸ್ ಎಸ್ ಪಥ ಸಂಚಲನ