ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪಣಜಿ(Panaji) : ವಿಮಾನವೊಂದು ಹೊರಡುವ ವೇಳೆ ತಡವಾದ ಕಾರಣಕ್ಕೆ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಗಾರ್ಭ ನೃತ್ಯ(Garbha Dance) ಮಾಡಿದ ಘಟನೆ ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Goa International Airport) ಚರ್ಚೆಗೆ ಕಾರಣವಾಗಿದೆ.

ಎಲ್ಲಡೆ  ನವರಾತ್ರಿ ಉತ್ಸವ ಸಂಭೃಮ. ದೇಶದ ನಾನಾ ಕಡೆಗಳಲ್ಲಿ  ಭಕ್ತಿಭಾವದಿಂದ ಹಬ್ಬ ಆಚರಿಸಲಾಗುತ್ತಿದೆ. ಹಬ್ಬದ ಹಿನ್ನಲೆಯಲ್ಲಿ ಎಲ್ಲೆಡೆ ದಾಂಡಿಯಾ(Dandia) , ಗಾರ್ಭ ನೃತ್ಯ ಮಾಡಲಾಗುತ್ತಿದೆ.   ರಾಜಸ್ಥಾನ(Rajasthan), ಮಹಾರಾಷ್ಟ್ರ(Maharashtra), ಗುಜರಾತ್(Gujarat), ಪಶ್ಚಿಮ ಬಂಗಾಳ(West Bengal), ಉತ್ತರಪ್ರದೇಶ (Uttarapradesh) ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ದುರ್ಗೆಯ ಉತ್ಸವವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜಿಸೋದು ವಾಡಿಕೆ.  ನವರಾತ್ರಿಯ(Navaratri) ಸಂದರ್ಭದಲ್ಲಿ ದಾಂಡಿಯಾ ಗಾರ್ಭ ನೃತ್ಯ ಜೋರಾಗಿರುತ್ತದೆ.

ಗೋವಾದಿಂದ ಗುಜರಾತ್ ಗೆ(Goa to Gujarat) ತೆರಳಬೇಕಿದ್ದ ವಿಮಾನ ಸುಮಾರು 5 ಗಂಟೆ ವಿಳಂಭವಾಯಿತು. ಇದರಿಂದಾಗಿ ಬೇಸರಗೊಂಡಿದ್ದ ಗುಜರಾತಿ ಪ್ರಯಾಣಿಕರು ಗೋವಾದ  ವಿಮಾನ ನಿಲ್ದಾಣದಲ್ಲಿಯೇ ಗಾರ್ಭ  ನೃತ್ಯ ಆರಂಭಿಸಿದರು.  ನೃತ್ಯದಲ್ಲಿ  ಅಲ್ಲಿದ್ದ ಸಿಬ್ಬಂದಿಗಳು ಕೂಡ ಪಾಲ್ಗೊಂಡಿದ್ದರು. ಈ ವೀಡಿಯೋ  ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಲಭ್ಯವಾಗಿರುವ ಮಾಹಿತಿಯ ಅನುಸಾರ- ಉತ್ತರ ಗೋವಾದ  ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ಸಂಜೆ 5 ಗಂಟೆಗೆ ಸೂರತ್ ಗೆ ವಿಮಾನ ತೆರಳಬೇಕಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ವಿಮಾನ ಆಗಮಿಸಲು ಸುಮಾರು 5 ಗಂಟೆ ವಿಳಂಭವಾಯಿತು. ಗೋವಾದಿಂದ ಸೂರತ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ನವರಾತ್ರಿ ಉತ್ಸವಕ್ಕೆ ತೆರಳಬೇಕಾಗಿತ್ತು. ಆದರೆ ವಿಮಾಣ ವಿಳಂಭವಾಗುತ್ತಿದ್ದಂತೆಯೇ ಈ ಪ್ರಯಾಣಿಕರು ಬೇಸರಗೊಂಡು ವಿಮಾನ ನಿಲ್ದಾಣದಲ್ಲಿಯೇ ದಾಂಡಿಯಾ ಗಾರ್ಭ  ನೃತ್ಯ ಆರಂಭಿಸಿಯೇ ಬಿಟ್ಟರು.

ದಾಂಡಿಯಾ ಗಾರ್ಭ  ನೃತ್ಯದಲ್ಲಿ ಅಲ್ಲಿನ ಸಿಬ್ಬಂದಿಗಳು ಮತ್ತು ಗಗನ ಸಖಿಯರು ಕೂಡ ಪಾಲ್ಗೊಂಡಿರುವುದು ಕಂಡುಬಂದಿದೆ.
ಇದನ್ನು ಓದಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ. ಇಬ್ಬರು ಪಾರು.

ಗೋಕರ್ಣದ ಗುಹೆಯಲ್ಲಿ ಮಕ್ಕಳೊಂದಿಗೆ ಸಿಕ್ಕ ರಷ್ಯಾ ಮಹಿಳೆ ಸುರಕ್ಷಿತವಾಗಿ ತಾಯ್ನಾಡಿಗೆ.