ಕೊಚ್ಚಿ(KOCHHIN) : ರಾಜ್ಯದ ಕರಾವಳಿ ಜಿಲ್ಲೆಗಳ ಎರಡು ಊರಿನ ಹೆಸರು ಇನ್ಮುಂದೆ ನೌಕಾಸೇನೆಯಲ್ಲಿ(NAVY) ರಾರಾಜಲಿಸಲಿದೆ.
ಕೊಚ್ಚಿನ್ ಶಿಫ್ ಯಾರ್ಡ್(KOCHHIN SHIP YARD) ನಲ್ಲಿ ನಿರ್ಮಾಣಗೊಂಡ ಎರಡು ಯುದ್ಧ ನೌಕೆಗಳಿಗೆ ಕೇಂದ್ರ ಸರಕಾರ ಮಲ್ಪೆ(MALPE) ಹಾಗೂ ಮುಲ್ಕಿ(MULKI) ಹೆಸರನ್ನು ಇಟ್ಟಿದೆ. ಭಾರತದ ನೌಕಾಪಡೆಗಾಗಿ ನಿರ್ಮಾಣಗೊಂಡ ಜಲಾಂತರ್ಗಾಮಿ ವಿರೋಧಿ ಯುದ್ಧ ನೌಕೆ ಐಎನ್‌ಎಸ್ ಮಲ್ಪೆ ಮತ್ತು ಐಎನ್‌ಎಸ್ ಮುಲ್ಕಿ ಸೋಮವಾರದಂದು ನೌಕಾಪಡೆಗೆ ಹಸ್ತಾಂತರಗೊಂಡಿದೆ.
ಈ ಸಂದರ್ಭದಲ್ಲಿ ಕೊಚ್ಚಿಯ ದಕ್ಷಿಣ ನೌಕಾಪಡೆಯ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ವಿ. ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿದ್ದರು. ಅವರ ಪತ್ನಿ ವಿಜಯ ಶ್ರೀನಿವಾಸ್ ಹಡಗುಗಳ ಉಡಾವಣೆ ಸಮಾರಂಭ ನೆರವೇರಿಸಿದರು. ನೌಕಪಡೆಯ ಹಡಗುಗಳಿಗೆ ಐಎನ್ಎಸ್ ಮಲ್ಪೆ(INS MALPE), ಐಎನ್ಎಸ್ ಮುಲ್ಕಿ (INS MULKI) ಎಂದು ಹೆಸರಿಡಲಾಗಿದೆ.
ಕೊಚ್ಚಿಯಲ್ಲಿ ಎಂಟು ಜಲಾಂತರ್ಗಾಮಿ ವಿರೋಧಿ ವಾರ್‌ಫೇರ್ ಶಾಲೋ ವಾಟರ್ ಕ್ರಾಫ್ಟ್ ಯೋಜನೆಯ ಭಾಗವಾಗಿರುವ ಈ ಹಡಗುಗಳು ಕಾರ್ಯಕ್ರಮದ ಅಡಿಯಲ್ಲಿ ಪ್ರಾರಂಭಿಸಲಾದ ನಾಲ್ಕನೇ ಮತ್ತು ಐದನೇ ಹಡಗುಗಳಾಗಿವೆ. ಇದನ್ನು ಏಪ್ರಿಲ್ 30, 2019 ರಂದು ಭಾರತೀಯ ರಕ್ಷಣಾ ಸಚಿವಾಲಯ ಮತ್ತು ಸಿಎಸ್ಎಲ್ ನಡುವೆ ಸಹಿ ಮಾಡಿದ ಒಪ್ಪಂದದ ಮೂಲಕ ಪ್ರಾರಂಭಿಸಲಾಗಿತ್ತು. ಈ ಹಡಗುಗಳು ಅತ್ಯಾಧುನಿಕ ಸೋನಾರ್ ವ್ಯವಸ್ಥೆಯನ್ನು ಹೊಂದಿದ್ದು, ಜಲಾಂತರ್ಗಾಮಿ ನೌಕೆಗಳ ಇರುವಿಕೆಯನ್ನು ಕಂಡುಹಿಡಿಯಬಹುದು.
ಹಡಗುಗಳು 78 ಮೀಟರ್ ಉದ್ದ ಮತ್ತು 11.36 ಮೀಟರ್ ಅಗಲವಿದೆ. ಇವು 25 ನಾಟಿಕಲ್ ಮೈಲು ವೇಗದಲ್ಲಿ ಚಲಿಸಬಲ್ಲವು. ಶತ್ರುಗಳ ಇರುವಿಕೆಯನ್ನು ಪತ್ತೆಹಚ್ಚಲು ಅವರು ಸುಧಾರಿತ ರೇಡಾರ್(RADOR) ಸಿಗ್ನಲಿಂಗ್ ವ್ಯವಸ್ಥೆಯನ್ನು ಹೊಂದಿದೆ.
ಉಡುಪಿ(UDUPI) ಜಿಲ್ಲೆಯ ಮಲ್ಪೆ ಹಾಗೂ ದಕ್ಷಿಣ ಕನ್ನಡ(SOUTHCANAR) ಜಿಲ್ಲೆಯ ಮೂಲ್ಕಿ ಊರಿನ ಹೆಸರನ್ನ ಭಾರತೀಯ ನೌಕಾ ಹಡಗುಗಳಿಗೆ ಹೆಸರಿಸಿರುವುದು ಕರಾವಳಿ (COASTAL) ಭಾಗದ ಜನತೆ ಹೆಮ್ಮೆ ಪಡುವಂತಾಗಿದೆ.
ಇದನ್ನು ಓದಿ : ಜಗನ್ನಾಥ ನಾಯ್ಕ ಇನ್ನೋರ್ವ ಮಗಳಿಗೆ ಉದ್ಯೋಗ ಕೊಡಿಸಿದ ಕುಮಾರಸ್ವಾಮಿ