ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ದೇಶಾದ್ಯಂತ ಆತಂಕ ಮೂಡಿಸಿದ  ಕೆಮ್ಮಿನ ಸಿರಪ್ ನೀಡಿದ್ದ ವೈದ್ಯನನ್ನ ಬಂಧಿಸಲಾಗಿದೆ. ಸಿರಪ್ ಸೇವಿಸಿ ಮಧ್ಯಪ್ರದೇಶ(Madhyapradesh) ಹಾಗೂ ರಾಜಸ್ಥಾನದಲ್ಲಿ(Rajasthan) 12 ಮಕ್ಕಳು ಸಾವನ್ನಪ್ಪಿದ್ದು  ಎಲ್ಲಡೆ ಆಕ್ರೋಶ ವ್ಯಕ್ತವಾಗಿದ್ದರಿಂದ ಕಟ್ಟೆಚ್ಚರ ವಹಿಸಲಾಗಿದೆ.

ಮಧ್ಯಪ್ರದೇಶದ ಛಿಂದ್ವಾರಾದಲ್ಲಿ  ಕೋಲ್ಡ್ರಿಫ್ ಸಿರಪ್ ನ್ನ ಮಕ್ಕಳಿಗೆ ನೀಡಲು  ಶಿಫಾರಸು ಮಾಡಿದ್ದ ವೈದ್ಯ ಪೊಲೀಸ್ ಬಂಧನದಲ್ಲಿದ್ದಾನೆ. ಮಕ್ಕಳ ತಜ್ಞ ಡಾ.ಪ್ರವೀಣ್ ಸೋನಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತನಿಖೆಯಿಂದ  ತಿಳಿದುಬಂದಿತ್ತು.

ಮಧ್ಯಪ್ರದೇಶ ಸರ್ಕಾರ ಕೋಲ್ಡ್ರಿಪ್ ಸಿರಪ್(Coldrip Syrup) ತಯಾರಿಸಿದ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿರುವ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ವಿರುದ್ಧವೂ ಪ್ರಕರಣ ದಾಖಲು ಮಾಡಿದೆ. ಈ ನಡುವೆ ಎರಡು ವರ್ಷದೊಳಗಿನ ಚಿಕ್ಕ ಮಕ್ಕಳಿಗೆ ಕೆಮ್ಮು, ಶೀತಕ್ಕೆ ಸಿರಪ್ ನೀಡದಂತೆ ಕೇಂದ್ರ ಆರೋಗ್ಯ ಇಲಾಖೆ(Health Department) ಸೂಚನೆ ನೀಡಿದೆ.

ಭಾರತದ ಆರು ರಾಜ್ಯಗಳಲ್ಲಿ ಇರುವ 19 ಔಷಧ ತಯಾರಿಕೆ ಘಟಕಗಳಲ್ಲಿನ ಉತ್ಪಾದನೆಯಾಗುತ್ತಿರುವ ಕೆಮ್ಮಿನ ಸಿರಪ್‌ ಹಾಗೂ ಆ್ಯಂಟಿಬಯೊಟಿಕ್‌ ಸೇರಿ ಇತರ ಔಷಧಿಗಳು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದನ್ನು ಪರಿಶೀಲಿಸುವ ಕಾರ್ಯಕ್ಕೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ಚಾಲನೆ ನೀಡಿದೆ.

ಭಾರತದಲ್ಲಿ ತಯಾರಾಗುವ ಕೆಮ್ಮಿನ ಸಿರಪ್‌ಗಳು(Cough Syrup) ಆಫ್ರಿಕಾ(Africa) ಸಹಿತ ಹಲವು ರಾಷ್ಟ್ರಗಳಲ್ಲೂ ಭಯಾನಕ ಪರಿಸ್ಥಿತಿ  ನಿರ್ಮಾಣ ಮಾಡಿದೆ. ತಮಿಳುನಾಡು(Tamilunadu), ಕೇರಳ ಸರ್ಕಾರಗಳು(Keral Department) ಮಕ್ಕಳ ಸಾವಿಗೆ ಕಾರಣವಾದ  ‘ಕೋಲ್ಡ್‌ರಿಫ್‌’ ಕೆಮ್ಮಿನ ಸಿರಪ್ ಮಾರಾಟವನ್ನು ನಿಷೇಧಿಸಿ  ಆದೇಶಿಸಿವೆ.

ಅನ್ಯ ರಾಜ್ಯಗಳಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರುವ ಸಿರಪ್‌ನ ಬಗ್ಗೆ ನಿಗಾ ವಹಿಸುವಂತೆ ಕರ್ನಾಟಕ ರಾಜ್ಯದ ಔಷಧ ನಿಯಂತ್ರಣ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ.  ನಮ್ಮ ರಾಜ್ಯಕ್ಕೆ ಅಪಾಯಕಾರಿ ಸಿರಪ್‌ನ ಪೂರೈಕೆ ಇಲ್ಲ. ಹೀಗಾಗಿ ಪೋಷಕರು ಆತಂಕ ಪಡಬೇಕಾಗಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌(Dinesh Gundurao) ತಿಳಿಸಿದ್ದಾರೆ.

ಇದನ್ನು ಓದಿ : ಶಿರಸಿಯಲ್ಲಿ ಅರಣ್ಯವಾಸಿಗಳ ಮಹಾ ಸಂಗ್ರಾಮ.

ಎಮ್ಮೆಗೆ ಢಿಕ್ಕಿ ಹೊಡೆದ ಸ್ಕೂಟಿ‌ ಸವಾರ ಸಾವು.