ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಾವೇರಿ (Haveri) – ವೇಗವಾಗಿ ತೆರಳುತ್ತಿದ್ದ ಕಾರೊಂದು ರೋಡ್ ಡಿವೈಡರ್ ದಾಟಿ  ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ಶಿಗ್ಗಾಂವಿ (Shiggavi) ತಾಲ್ಲೂಕಿನ ತಡಸ ತಿಮ್ಮಾಪುರ(Timmapura) ಬಳಿ ಸಂಭವಿಸಿದೆ.

ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಚಂದ್ರಮ್ಮ (59), ಚಂದ್ರಮ್ಮನ ಪುತ್ರಿ ಹರಿಹರದ ಮೀನಾ (38), ಹರಿಹರದ ಮಹೇಶ್ ಕುಮಾರ್ ಸಿ  (41), ಹರಿಹರದ ಧನವೀರ್ (10)ಮೃತರೆಂದು ಗುರುತಿಸಲಾಗಿದೆ.

  ಪುಣೆ ಬೆಂಗಳೂರು(Pune-Bangalore) ರಾಷ್ಟ್ರೀಯ ಹೆದ್ದಾರಿ 48(NH 48) ರಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.  ಮಹಿಂದ್ರಾ ಎಕ್ಸ್ ಯುವಿ 700 ಕಾರು ಹಾವೇರಿ(Haveri) ಕಡೆಯಿಂದ ಹುಬ್ಬಳ್ಳಿ(Hubbli) ಕಡೆಗೆ ಹೊರಟಿತ್ತು. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಹುಬ್ಬಳ್ಳಿಯಿಂದ ಬೆಂಗಳೂರು(Bangalore) ಕಡೆಗೆ ಬರುತ್ತಿದ್ದ ಟಾಟಾ ಆಲ್ಟ್ರೋಜ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಆಲ್ಟ್ರೋಜ್ ಕಾರಿನಲ್ಲಿದ್ದ  10 ವರ್ಷದ ಬಾಲಕ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಹಾವೇರಿ ಎಸ್ಪಿ ಅಂಶುಕುಮಾರ   ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಡಸ ಪೊಲೀಸ್ ಠಾಣೆಯಲ್ಲಿ(Tadas police Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಹ್ಯಾಟ್ರಿಕ್ ಹೀರೋ ಶಿವರಾಜಕುಮಾರಗೆ ಸತತ ಆರು ಗಂಟೆ ವೈದ್ಯರಿಂದ ಆಪರೇಷನ್.

ಮಾರಿ ಹೊರೆಯ ಗೊಂಬೆ ನಾಪತ್ತೆ ಆರೋಪ. ಗೊಂದಲದ ವಾತಾವರಣ.

ಕಾರಾಗೃಹದ ಎದುರು ಡ್ರೋನ್ ಪ್ರತಾಪ್ ಕಣ್ಣೀರು

ನಸುಕಿನ ಜಾವ ಸಕ್ಕರೆ ತುಂಬಿದ ಲಾರಿಗೆ ಬೆಂಕಿ.