ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi): ರಾಜ್ಯ ಅರಣ್ಯ ಸಚಿವ(Forest Minisher) ಈಶ್ವರ ಖಂಡ್ರೆ(Ishwar Khandre) ಅವರು ಪ್ರಸಕ್ತ ವರ್ಷದಲ್ಲಿ ಅರಣ್ಯ ಅತಿಕ್ರಮಣ ಪ್ರದೇಶ ಒಕ್ಕಲೆಬ್ಬಿಸುವ ಹುನ್ನಾರು ನಡೆಸಿದ್ದಾರೆ. ಅರಣ್ಯಾಧಿಕಾರಿಗಳಿಗೆ  ಟಾರ್ಗೆಟ್ ನೀಡಿದ ನಿರ್ದೇಶನದಿಂದ ಒಕ್ಕಲೆಬ್ಬಿಸಲು ಒತ್ತಡವಿದ್ದರೆ, ಇನ್ನೊಂದೆಡೆ ಅರಣ್ಯ ಇಲಾಖೆಯ ಕಾರ್ಯದಿಂದ ಅರಣ್ಯವಾಸಿಗಳಿಗೆ ಕಿರಿಕಿರಿ ಉಂಟಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ  ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಮಾರ್ಚ್ ಕೊನೆಯಲ್ಲಿ, ಕರ್ನಾಟಕದ ರಾಜ್ಯಾದ್ಯಂತ 10 ಸಾವಿರ ಎಕರೆ ಒಕ್ಕಲೆಬ್ಬಿಸುವಂತೆ ಸರ್ಕಾರದ ಆದೇಶವನ್ನು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ, (ಅರಣ್ಯ ಪಡೆ ಮುಖ್ಯಸ್ಥೆ) ಶ್ರೀಮತಿ ಮೀನಾಕ್ಷಿ ನೇಗಿ ಅವರು ಲಿಖಿತ ಆದೇಶವನ್ನು ನೀಡಿದ್ದಾರೆ. ಅದರಂತೆ, ಉತ್ತರಕನ್ನಡ(Uttarakannada) ಜಿಲ್ಲೆಯಲ್ಲಿ ಮುಂದಿನ ಮಾರ್ಚ್ ಅಂತ್ಯದ ಒಳಗೆ ಅರಣ್ಯವಾಸಿಗಳಿಂದ 1450 ಎಕರೆ ಪ್ರದೇಶ ಒಕ್ಕಲೆಬ್ಬಿಸಲು ಗುರಿ ನಿಗದಿಗೊಳಿಸಲಾಗಿದೆ ಎಂದು ನಾಯ್ಕ ತಿಳಿಸಿದ್ದಾರೆ.

ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ಅರಣ್ಯ ಅತಿಕ್ರಮಣ ಪ್ರದೇಶ ವಶಪಡಿಸುವ ಮೂಲ ಉದ್ದೇಶವಾಗಿರುವುದು ಹಾಗೂ ಒಕ್ಕಲೆಬ್ಬಿಸಲು ಕಟ್ಟುನಿಟ್ಟಿನ ನೀತಿ ಪಾಲಿಸಬೇಕೆಂದು ಆದೇಶದಲ್ಲಿ ಸೂಚಿಸಲ್ಪಟ್ಟಿರುವುದು ಅರಣ್ಯವಾಸಿಗಳಿಗೆ ಮುಂದಿನ ದಿನಗಳಲ್ಲಿ  ಹೆಚ್ಚಿನ ಸಮಸ್ಯೆ ಉಂಟಾಗುವುದರಲ್ಲಿ ಸಂ ಹೇಳಿದರು.

ಅಡಕತ್ತರಿಯಲ್ಲಿ ಅರಣ್ಯ ಇಲಾಖೆ : ಸಚಿವರ ಕಟ್ಟುನಿಟ್ಟಿನ ಆದೇಶವು ಅರಣ್ಯ ಇಲಾಖೆಯ ಅಧಿಕಾರಿಗಳು ಅಡಕತ್ತರಿಯಲ್ಲಿ ಸಿಕ್ಕ ಪರಿಸ್ಥಿತಿಯಲ್ಲಿದ್ದಾರೆ. ಒತ್ತಡದಿಂದ ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳ ಮೇಲೆ ಜರುಗಿಸುವ ಕ್ರಮಗಳು ಅರಣ್ಯ ವಾಸಿಗಳಿಗೆ ದಿನನಿತ್ಯ ಕಿರಿಕಿರಿ ಉಂಟಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿದಂತೆ, ಜಿ.ಪಿ.ಎಸ್  ಆಗದೇ ಇರುವಂತ ಮತ್ತು ಸಾಗುವಳಿ ಕ್ಷೇತ್ರಕ್ಕೆ ಸಂಬಂಧಿಸಿ ಜಿ.ಪಿ.ಎಸ್  ಕಡಿಮೆ ಆಗಿರುವಂತ ಅರಣ್ಯವಾಸಿಗಳು ದಿನನಿತ್ಯ ತೊಂದರೆ ಅನುಭವಿಸುವ ಪರಿಸ್ಥಿತಿ ಬಂದಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.