ಕಾರವಾರ : ಸಮುದ್ರತೀರದಲ್ಲಿ ಹುಚ್ಚಾಟ ಆಡಲು ಮುಂದಾದ ಪ್ರವಾಸಿಗರಿಗೆ ಬಿಸಿಬಿಸಿ ಕಜ್ಜಾಯ ನೀಡಿದ ಘಟನೆ ಕಾರವಾರದಲ್ಲಿ ನಡೆದಿದೆ.
ಕಾರವಾರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಅಪಾಯದ ಎಚ್ಚರಿಕೆ ನಿರ್ಲಕ್ಷಿಸಿ ಒಂದಿಬ್ಬರು ಪ್ರವಾಸಿಗರು ಸಮುದ್ರಕ್ಕಿಳಿದಿದ್ದರು. ಲೈಫ್‌ಗಾರ್ಡ್ ಸಿಬ್ಬಂದಿಗಳು ಎಚ್ಚರಿಕೆ ನೀಡಿದ್ದರೂ ಕ್ಯಾರೇ ಮಾಡಿಲ್ಲ. ಹೀಗಾಗಿ ಸಮುದ್ರದಲ್ಲಿ ಈಜುತ್ತಿದ್ದ ಪ್ರವಾಸಿಗರನ್ನ ಎಳೆದುತಂದು ಬಾರಿಸಿದ್ದಾರೆ.
ಅಪಾಯಕಾರಿ ರೀತಿಯಲ್ಲಿ ಅಲೆಗಳು ಅಪ್ಪಳಿಸುತ್ತಿದ್ದರೂ ಲೆಕ್ಕಿಸದೇ ಪ್ರವಾಸಿಗರಿಂದ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದರು. ಹೀಗಾಗಿ ಸೂಚನೆ ನಿರ್ಲಕ್ಷ್ಯಿಸಿ ನೀರಿಗಿಳಿದಿದ್ದಕ್ಕೆ ಜೀವರಕ್ಷಕ ಸಿಬ್ಬಂದಿಗಳು ಹೊಡೆದು ಬುದ್ದಿ ಹೇಳಿದ್ದಾರೆ. ಲೈಫ್ ಗಾರ್ಡ್ ಸಿಬ್ಬಂದಿಗಳ ನಿರ್ಧಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.