ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಮೀನುಗಾರ ಯುವಕನೋರ್ವ ದುರಂತವಾಗಿ(Tragedy) ಸಾವನ್ನಪ್ಪಿದ್ದಾನೆ.
ಮಾಜಾಳಿ ದಾಂಡೇಭಾಗದ ನಿವಾಸಿ ಅಕ್ಷಯ ಅನಿಲ ಮಾಜಾಳಿಕರ್ (24) ಮೃತ ದುರ್ದೈವಿ. ಅಕ್ಟೋಬರ್ 14ರಂದು ಮೀನು ಹಿಡಿಯಲು ಅಕ್ಷಯ ತೆರಳಿದ್ದ. ಸಮುದ್ರದಲ್ಲಿ ಮೀನು ಹಿಡಿಯುವ ವೇಳೆ ಕಾಂಡಿ ಮೀನೊಂದು ಹಾರಿ ಹೊಟ್ಟೆಯ ಕೆಳಭಾಗಕ್ಕೆ ಚುಚ್ಚಿದೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ಅಕ್ಷಯನಿಗೆ ಗಾಯದ ಸ್ಥಳದಲ್ಲಿ ಹೊಲಿಗೆ ಹಾಕಿದ ವೈದ್ಯರು ನಂತರ ಡಿಸ್ಚಾರ್ಜ್ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ
ಇಂದು ಬೆಳಿಗ್ಗೆ ಅಕ್ಷಯ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಅಕ್ಷಯ ಉತ್ತಮ ಕ್ರೀಡಾಪಟುವಾಗಿದ್ದು, ಆತನ ಸಾವಿಗೆ ಕುಟುಂಬಸ್ಥರು ಹಾಗೂ ಸಂಬಂಧಿಕರು, ಸ್ನೇಹಿತರು ದುಃಖ ವ್ಯಕ್ತಪಡಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಕೆಡಿಸಿಸಿ ಬ್ಯಾಂಕ್ ಇತಿಹಾಸದಲ್ಲಿ ಮೊದಲ ಬಾರಿಗೆ ದಾಪುಗಾಲಿಟ್ಟ ಮಹಿಳಾ ಅಭ್ಯರ್ಥಿ. ಸರಸ್ವತಿ ಎನ್. ರವಿ ನಾಮಪತ್ರ ಸಲ್ಲಿಕೆ.
ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ. ಭಟ್ಕಳ ಆಹಾರ ಅಧಿಕಾರಿಗಳ ಪೊಲೀಸರ ದಾಳಿ.